ಕರ್ನಾಟಕ

ಮಗುವಿನ ಜೊತೆ ಕಟ್ಟಡದಿಂದ ಹಾರಿದ ಮಹಿಳೆ; ಸಾವಿಗೆ ಕಾರಣ ಗಂಡ?

Pinterest LinkedIn Tumblr


ಬೆಂಗಳೂರು: ನಗರದಲ್ಲಿ ವಾಸವಾಗಿದ್ದ ಗುಜರಾತ್​ ಮೂಲದ ಗೃಹಿಣಿ ಮಗುವಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ನಿರಂತರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಹಾಗೂ ಆಕೆಯ ಗಂಡ ಇಬ್ಬರೂ ಗುಜರಾತ್​ ಮೂಲದವರು. ಕಳೆದ 20 ವರ್ಷಗಳಿಂದ ಬೆಂಗಳೂರಿನ ಪುಟ್ಟೇನಹಳ್ಳಿಯ ಎಲೈಟ್ ಅಪಾರ್ಟ್ ಮೆಂಟ್​ನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದೇ ವಿಚಾರವಾಗಿ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಹಿಳೆ ವಿಡಿಯೋ ಒಂದನ್ನು ಮಾಡಿದ್ದಳು. “ಪತಿ ನನ್ನ ಬಗ್ಗೆ ಸದಾ ಅನುಮಾನ ಪಡುತಿದ್ದ,”ಎಂದು ಆಕೆ ಬೇಸರದಲ್ಲಿ ಹೇಳಿಕೊಂಡಿದ್ದಾಳೆ. ಬಳಿಕ ಅಪಾರ್ಟ್​​ಗೆ 20ನೇ ಫ್ಲೋರ್​ಗೆ ಏಳು ವರ್ಷದ ಮಗುವಿನ ಜೊತೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೂ ಮೊದಲು ಮಹಿಳೆ ಮಾಡಿದ ವಿಡಿಯೋ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

Comments are closed.