ಕರ್ನಾಟಕ

ಕಾವೇರಿ ನದಿ ಪಾತ್ರದ ಪ್ರದೇಶದಲ್ಲಿ ಧಾರಾಕಾರ ಮಳೆ: ಕೆ.ಆರ್.ಎಸ್. ಒಳ, ಹೊರ ಹರಿವು ಪ್ರಮಾಣ ಹೆಚ್ಚಳ

Pinterest LinkedIn Tumblr


ಮಂಡ್ಯ: ಕೊಡಗು ಹಾಗೂ ವಿನೋದ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆ.ಆರ್.ಎಸ್. ಜಲಾಶಯದ ಒಳ ಮತ್ತು ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಶುಕ್ರವಾರ ಸಂಜೆ 52807 ಕ್ಯುಸೆಕ್‌ ನೀರನ್ನು ಕನ್ನಂಬಾಡಿ ಕಟ್ಟೆಯಿಂದ ಹೊರ ಬಿಡಲಾಗಿದೆ.

ಕಳೆದ ಮೂರು ದಿನಗಳಿಂದಲೂ ಕೆ.ಆರ್.ಎಸ್. ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹಂತಹಂತವಾಗಿ ಹೆಚ್ಚಾಗುತ್ತಿದೆ.

ಅದೇ ರೀತಿ ಹೊರ ಹರಿವಿನ ಪ್ರಮಾಣವನ್ನು ಕೂಡ ಒಳಹರಿವಿನ ಪ್ರಮಾಣ ಆಧರಿಸಿ ಹೆಚ್ಚಳ ಮಾಡಲಾಗುತ್ತಿದೆ.

ಗುರುವಾರ ಸಂಜೆ ಜಲಾಶಯದ ಒಳಹರಿವಿನ ಪ್ರಮಾಣವೂ 36454 ಕ್ಯುಸೆಕ್‌ಗೆ ಹೆಚ್ಚಾಗಿತ್ತು. ಇದರೊಂದಿಗೆ ನದಿಗೆ 41089 ಕ್ಯುಸೆಕ್‌ ಹಾಗೂ ನಾಲೆಗಳಿಗೆ 2508 ಕ್ಯುಸೆಕ್‌ ಸೇರಿದಂತೆ ಒಟ್ಟಾರೆ 43597 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿತ್ತು.

ಶುಕ್ರವಾರ ಬೆಳಗ್ಗೆ ಜಲಾಶಯಕ್ಕೆ 44,727 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. ಅದೇ ವೇಳೆಗೆ 44,518 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿತ್ತು. ಆದರೆ, ಸಂಜೆ ವೇಳೆಗೆ ಒಳ ಹರಿವಿನ ಪ್ರಮಾಣವು 53016 ಕ್ಯುಸೆಕ್‌ಗೆ ಹೆಚ್ಚಾದ ಹಿನ್ನೆಲೆಯಲ್ಲಿ ಹೊರಹರಿವಿನ ಪ್ರಮಾಣವನ್ನು 52807 ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ. ಇದರಲ್ಲಿ ನಾಲೆಗಳಿಗೆ 2508 ಕ್ಯುಸೆಕ್‌ ಹಾಗೂ ನದಿಗೆ 50299 ಕ್ಯುಸೆಕ್‌ ನೀರನ್ನು ಬಿಡಲಾಗಿದೆ.

Comments are closed.