ಕರ್ನಾಟಕ

ಪುತ್ರಿಯ ಆಶ್ಲೀಲ ವಿಡಿಯೋ ತೆಗೆದು ಸಾವಿಗೆ ಕಾರಣನಾಗಿದ್ದ ತಂದೆಗೆ 13 ವರ್ಷ ಶಿಕ್ಷೆ

Pinterest LinkedIn Tumblr


ಚಿಕ್ಕಬಳ್ಳಾಪುರ: ಹೆತ್ತ ಮಗಳು ಸ್ನಾನ ಮಾಡುವ ದೃಶ್ಯ ವಿಡಿಯೋ ಚಿತ್ರೀಕರಣ ಮಾಡುವ ಜತೆಗೆ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟು ಮಗಳಿಗೆ ಮಾನಸಿಕ ಕಿರುಕುಳ ನೀಡಿ ಅವಳ ಸಾವಿಗೆ ಕಾರಣನಾದ ಪಾಪಿ ತಂದೆಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 13 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನಗರದ ನಿವಾಸಿಯಾಗಿರುವ ಪಾಂಡುರಂಗ (45) ಅಪರಾಧಿಯಾಗಿದ್ದು, ಕಳೆದ 2014ರಲ್ಲಿ ಪಿಯುಸಿ ಓದುತ್ತಿದ್ದ ಹೆತ್ತ ಮಗಳ ವಿಡಿಯೋಗಳನ್ನು ರೆಕಾರ್ಡ್ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಬಿಡುವ ಮೂಲಕ ವಿಕೃತಿ ಮೆರೆದಿದ್ದ. ಇದರಿಂದ ತೀವ್ರ ಮಾನಸಿಕ ಕಿರುಕುಳಕ್ಕೆ ಒಳಗಾದ ಬಾಲಕಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸತತವಾಗಿ ವಿಚಾರಣೆ ನಡೆದ ನಂತರ ಶುಕ್ರವಾರ ನ್ಯಾಯಾಧೀಶರಾದ ಬಿ.ಸಿ. ಭಾನುಮತಿ ಅಪರಾಧಿ ಪಾಂಡುರಂಗನಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು ಮೂರು ವರ್ಷಗಳ ಸಾದಾ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Comments are closed.