ಬೆಂಗಳೂರು: “ಜಮ್ಮು ಕಾಶ್ಮೀರದಲ್ಲಿ ಸದ್ಯ ಇರುವ ದೇವಸ್ಥಾನ ಹಾಗೂ ಈವರೆಗೂ ನಾಶವಾಗಿರುವ ದೇವಸ್ಥಾನಗಳ ಸರ್ವೇ ಕಾರ್ಯ ಆರಂಭಿಸಲಿದ್ದೇವೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮ್ಮು- ಕಾಶ್ಮೀರದಲ್ಲಿ ಸದ್ಯ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯುತ್ತಿರುವ ಸುಸಜ್ಜಿತ ದೇವಸ್ಥಾನಗಳು ಎಷ್ಟು
ಇವೆ? ಮತ್ತು ಎಲ್ಲೆಲ್ಲಿ ದೇವಸ್ಥಾನಗಳು ನಾಶವಾಗಿವೆ? ನಾಶಕ್ಕೆ ಕಾರಣ ಏನು? ಎಂಬಿತ್ಯಾದಿ ಎಲ್ಲ ಅಂಶಗಳನ್ನು ಸರ್ವೇ ಮೂಲಕ ಕಂಡುಹಿಡಿಯಲಿದ್ದೇವೆ.
ಜತೆಗೆ ಸರ್ಕಾರಿ ಶಾಲೆಗಳ ಸ್ಥಿತಿಗತಿ, ಪ್ರವಾಸೋದ್ಯಮದ ದೃಷ್ಟಿಯಿಂದ ಚಲನಚಿತ್ರ ಮಂದಿರಗಳು ಎಷ್ಟಿವೆ ಮತ್ತು ಎಷ್ಟು ನಾಶವಾಗಿವೆ ಎಂಬುದರ ಸರ್ವೇ ಕೂಡ
ಮಾಡಲಿದ್ದೇವೆ. ಒಂದು ಅಂದಾಜಿನ ಪ್ರಕಾರ ಸುಮಾರು 50,000 ದೇವಾಲ ಯಗಳು ನಾಶಗೊಂಡಿರುವ ಮಾಹಿತಿ ಇದೆ ಎಂದು ವಿವರ ನೀಡಿದರು.
ಉಗ್ರವಾದದ ವಿರುದ್ಧ ಕ್ರಮ: ಭಯೋತ್ಪಾದನಾ ನಿಗ್ರಹಕ್ಕೆ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ವಿಶೇಷ ಸ್ಥಾನಮಾನ ರದ್ದತಿಗೂ ಪೂರ್ವ ದಲ್ಲಿ 65000
ಭಯೋತ್ಪಾದನಾ ಕೃತ್ಯ ನಡೆದಿದೆ. ಪಾಕಿಸ್ತಾನ ಮತ್ತು ಚೀನಾದಲ್ಲಿ ಉತ್ಪಾದಿಸಿರುವ 37 ಸಾವಿರ ಲೈಟ್ ಮಿಷನ್ ಗನ್(ಎಕೆ 47) ಈವರೆಗೆ ವಶಪಡಿಸಿಕೊಂಡಿದ್ದೇವೆ. 18 ಸಾವಿರ ಬಂದೂಕುಗಳನ್ನು ವಶಪಡಿಸಿ ಕೊಂಡಿದ್ದೇವೆ. ಸಾಮಾನ್ಯ ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ
ಎಂದು ಅವರು ಹೇಳಿದರು.
ಕೇಂದ್ರದಿಂದ ಶೀಘ್ರ ಅನುದಾನ
ದೇಶದ ವಿವಿಧ ಭಾಗದಲ್ಲಿ ಮಳೆ, ಪ್ರವಾಹದಿಂದ ಅಪಾರ ನಷ್ಟವಾಗಿದೆ. ಎಲ್ಲ ರಾಜ್ಯಗಳ ಮಾಹಿತಿ ಪಡೆಯುತ್ತಿದ್ದೇವೆ. ಸದ್ಯ ಆಯಾ ರಾಜ್ಯಗಳಲ್ಲಿ ಇರುವ ವಿಪತ್ತು ನಿಧಿ ಬಳಕೆ
ಮಾಡಿಕೊಳ್ಳಲಾಗುತ್ತಿದೆ. ಎಲ್ಲ ರಾಜ್ಯಗಳ ವರದಿ ಬಂದ ನಂತರ ಕೇಂದ್ರದಿಂದ ಶೀಘ್ರ ವಿಪತ್ತು ನಿಧಿಗೆ ಅನುದಾನದ ಮರು ಪಾವತಿ ಜತೆಗೆ ನಷ್ಟ ಪರಿಹಾರಕ್ಕಾಗಿ ವಿಶೇಷ
ಅನುದಾನ ಬಿಡುಗಡೆಯಾಗಲಿದೆ ಎಂದು ಜಿ.ಕಿಶನ್ ರೆಡ್ಡಿ ಹೇಳಿದರು.
Comments are closed.