ಮಡಿಕೇರಿ: ಭಾವನೆಗಳು ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇರುತ್ತವೆ ಅನ್ನುವುದನ್ನು ನಿರೂಪಿಸುವಂತಹ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮಡಿಕೇರಿ ನಗರದ ಮಹದೇವಪೇಟೆಯ ಮುಖ್ಯ ರಸ್ತೆಯಲ್ಲಿ ಹಸುವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದೆ.
ಬಹುಶಃ ಇದಕ್ಕೆ ಹೃದಯಾಘಾತವಾಗಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯ. ಆದರೆ ಈ ಹಸುವಿನ ಜೊತೆ ಬಂದಿದ್ದ ಮತ್ತೊಂದು ಎತ್ತು ಮಾತ್ರ.
ಈ ಸಾವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕೆಳಕ್ಕೆ ಬಿದ್ದು ನಿರ್ಜೀವವಾಗಿದ್ದ ತನ್ನ ಸಂಗಾತಿ ಹಸುವನ್ನು ಮುಖದಲ್ಲಿ ಉಜ್ಜುತ್ತಾ ಕೊಂಬಿನಲ್ಲಿ ಮೇಲೆತ್ತಲು ಪದೇ ಪದೇ ಪ್ರಯತ್ನಿಸುತ್ತಿತ್ತು.
ಹಸುವನ್ನು ಮೇಲೆತ್ತುವ ಇದರ ಪ್ರಯತ್ನ ಸುಮಾರು ಅರ್ಧಗಂಟೆಗಳ ಕಾಲ ಮುಂದುವರಿದಿತ್ತು. ಈ ದನದ ಮೂಕ ರೋಧನೆ ನೋಡಿದ ಸುತ್ತಮುತ್ತಲಿನವರಿಗೆ ಕಣ್ಣಂಚಿನಲ್ಲಿ ನೀರು ಬಂದಿತ್ತು. ಪಶುಗಳಿಗೆ ಮಾತು ಬಾರದೇ ಇರಬಹುದು. ಆದರೆ ಮಾತನ್ನೂ ಮೀರಿದ ಭಾವನಗೆಳಿವೆ. ಸಾವು-ಬದುಕಿನ ಪ್ರಜ್ಞೆ ಇದೆ ಎಂಬುದನ್ನು ಈ ಘಟನೆ ಹೇಳುತ್ತಿತ್ತು. ಕೊನೆಗೆ ಮಡಿಕೇರಿ ನಗರಸಭೆ ಸಿಬ್ಬಂದಿ ಮೃತ ಹಸುವಿನ ಕಳೇಬರ ಕೊಂಡೊಯ್ದ ಬಳಿಕ ಆ ದನ ಅಲ್ಲಿಂದ ಮರೆಯಾಯಿತು.
Comments are closed.