ಕರ್ನಾಟಕ

30 ಸೆಕೆಂಡ್‌ಗಳಲ್ಲಿ ಆರು ಬೇಯಿಸಿದ ಮೊಟ್ಟೆ ತಿಂದು ನೋಡುಗರಲ್ಲಿ ಆಶ್ಚರ್ಯ ಮೂಡಿಸಿ ಭೂಪ

Pinterest LinkedIn Tumblr

ಮೈಸೂರು, ಅಕ್ಟೋಬರ್ 4: ಯುವಕನೊಬ್ಬ ಕೇವಲ 30 ಸೆಕೆಂಡ್‌ನಲ್ಲಿ 6 ಬೇಯಿಸಿದ ಮೊಟ್ಟೆ ತಿನ್ನುವ ಮೂಲಕ ನೋಡುಗರಲ್ಲಿ ಆಶ್ಚರ್ಯ ಮೂಡಿಸಿದ್ದಾನೆ. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಆಯೋಜಿಸಲಾಗಿದ್ದ ಮೊಟ್ಟೆ ತಿನ್ನುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಬಾಬುರಾಯನ ಕೊಪ್ಪಲಿನ ಇಪ್ಪತ್ತೊಂದು ವರ್ಷದ ಕೌಶಿಕ್ ಕೇವಲ 30 ಸೆಕೆಂಡ್‌ಗಳಲ್ಲಿ ಆರು ಬೇಯಿಸಿದ ಮೊಟ್ಟೆಗಳನ್ನು ತಿಂದು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

37 ಸೆಕೆಂಡ್‌ಗಳಲ್ಲಿ 6 ಮೊಟ್ಟೆಗಳನ್ನು ತಿಂದು ಪೂರೈಸಿದ 21 ವರ್ಷದ ಮಾರ್ಬಳ್ಳಿ ಹುಂಡಿ ಯುವಕ ಪ್ರಜ್ವಲ್ ದ್ವಿತೀಯ ಸ್ಥಾನ ಹಾಗೂ 39 ಸೆಕೆಂಡ್‌ನಲ್ಲಿ 6 ಮೊಟ್ಟೆಗಳನ್ನು ತಿಂದ ಹುಣಸೂರಿನ ಯುವಕ ಮಂಜುನಾಥ್ ಅವರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೆ ದಸರಾ ಆಹಾರ ಉಪಸಮಿತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಈ ಹಿಂದೆಯೂ ಕೌಶಿಕ್ ಹಲವು ಬಾರಿ ಆಹಾರ ಮೇಳದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮೈಸೂರ್ ಪಾಕ್ ತಿನ್ನುವುದು, ರಾಗಿಮುದ್ದೆ ಮತ್ತು ನಾಟಿ ಕೋಳಿ ಸಾಂಬಾರ್ ತಿನ್ನುವುದು, ಪಕೋಡ ತಿನ್ನುವುದು ಹಾಗೂ ಇಡ್ಲಿ ತಿನ್ನುವ ವಿವಿಧ ಸ್ಪರ್ಧೆಗಳಲ್ಲಿ ಅವರು ಬಹುಮಾನ ಪಡೆದಿದ್ದರು.

ಸ್ಪರ್ಧೆಯಲ್ಲಿ 21 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಬಳಿಕ ಲಾಟರಿ ಮೂಲಕ 10 ಜನರನ್ನು ಆಯ್ಕೆ ಮಾಡಲಾಯಿತು. ಎಲ್ಲರಿಗೂ 6 ಮೊಟ್ಟೆಗಳನ್ನು ನೀಡಿ ತಿನ್ನಲು 1 ನಿಮಿಷ ಸಮಯ ನಿಗದಿ ಮಾಡಲಾಗಿತ್ತು.

Comments are closed.