ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೆ ಹಳೇ ವರಸೆಯನ್ನು ಮುಂದುವರಿಸಿದ್ದಾರೆ. ಕಳೆದ ಬಾರಿ ಮಡಿಕೇರಿಯಲ್ಲಾದರೆ ಈ ಬಾರಿ ಹುಚ್ಚಾಟ ದೊಡ್ಡಬಳ್ಳಾಪುರದಲ್ಲಿ ಎಂಬುದಷ್ಟೇ ವ್ಯತ್ಯಾಸ. ಕಾಲೇಜ್ಗೆ ತೆರಳಲು ಬಸ್ಗೆ ಕಾಯುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ವೆಂಕಟ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ದೊಡ್ಡಬಳ್ಳಾಪುರ ಟೋಲ್ ಗೇಟ್ ಬಳಿ ಕಾಣಿಸಿಕೊಂಡ ವೆಂಕಟ್ ಯುವತಿಯನ್ನು ತಡೆದು ಆಕೆಯನ್ನು ಬಸ್ ಹತ್ತದ್ದಂತೆ ತಡೆದರು. ಈ ವೇಳೆ ವೆಂಕಟ್ನ ಈ ಅನುಚಿತ ವರ್ತನೆಯ ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದರು. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಅಸಭ್ಯ ವರ್ತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಇದೇ ಮಾರ್ಗವಾಗಿ ಹೋಗುತ್ತಿದ್ದ ವಾಹನ ಸವಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇದೇ ವೇಳೆ ಕೊಳಚೆ ಬಟ್ಟೆ ಧರಿಸಿದ್ದ ವೆಂಕಟ್ನನ್ನು ಕೆಲ ಯುವಕರು ಗುರುತಿಸಿದ್ದಾರೆ. ಸಾರ್ವಜನಿಕರು ಸೇರುತ್ತಿದ್ದಂತೆ ಖರ್ಚಿಗೆ ಕಾಸಿಲ್ಲದೆ ಇಲ್ಲಿರುವುದಾಗಿ ವೆಂಕಟ್ ಹೇಳಿದ್ದು, ವೇಳೆ ಕೆಲವರು ಹಣ ನೀಡಿ ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆಯಷ್ಟೇ ಹುಚ್ಚ ವೆಂಕಟ್ ಮಂಡ್ಯ ಮತ್ತು ಮಡಿಕೇರಿಯಲ್ಲಿ ದಾಂಧಲೆ ಎಬ್ಬಿಸಿದ್ದರು. ಅದರಲ್ಲೂ ಮಡಿಕೇರಿ ನಗರದ ಡಿಪೋ ಬಳಿಯಿದ್ದ ಕಾರಿನ ಗಾಜನ್ನು ಹೊಡೆದಿದ್ದರು. ಇದರಿಂದ ರೊಚ್ಚಿಗೆದಿದ್ದ ಸ್ಥಳೀಯರು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿ, ಪೊಲೀಸರಿಗೆ ಒಪ್ಪಿಸಿದರು.
ಆ ಬಳಿಕ ಮಂಡ್ಯದಲ್ಲೂ ಇಂತಹದ್ದೇ ವರ್ತನೆಯನ್ನು ವೆಂಕಟ್ ಪುನಾರ್ವತಿಸಿದ್ದರು. ಆ ಬಳಿಕ ಎಲ್ಲೂ ಕಾಣಿಸಿಕೊಳ್ಳದ ವೆಂಕಟ್ ಇದೀಗ ಮತ್ತೆ ತಮ್ಮ ಹಳೆಯ ವರಸೆಯೊಂದಿಗೆ ದೊಡ್ಡಬಳ್ಳಾಪುರದಲ್ಲಿ ಪ್ರತ್ಯಕ್ಷರಾಗಿದ್ದಾರೆ.
Comments are closed.