ಮೈಸೂರು: ಎಚ್.ವಿಶ್ವನಾಥ್ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಜೆಡಿಎಸ್ ತೊರೆದಿಲ್ಲ ಎಂದು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಸತ್ಯ ಮಾಡಿದರೆ ನಾನು ಕ್ಷಮೆ ಕೇಳಲು ಸಿದ್ಧ ಎಂದು ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಚ್.ವಿಶ್ವನಾಥ್ ಅವರು ನೀಡಿರುವ ಸವಾಲು ಸ್ವೀಕರಿಸಿದ್ದೇನೆ. ಅವರು ನಿಗದಿಪಡಿಸಿದಂತೆಯೇ ಗುರುವಾರ ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹಾಜರಿರುತ್ತೇನೆ. ಅವರು ಬಂದು ನಾನು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಸತ್ಯ ಮಾಡಲಿ, ನಾನು ಅವರ ಕ್ಷಮೆ ಕೇಳಲು ಸಿದ್ಧ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಎಚ್.ವಿಶ್ವನಾಥ್ ಮಂತ್ರಿ ಸ್ಥಾನ ಬೇಡ ಅಂದಿದ್ದರು. ಆ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದನ್ನು ಕುಮಾರಸ್ವಾಮಿ ನನಗೆ ಒಪ್ಪಿಸಿದ್ದರು. ನಾನು ಒಟ್ಟಿಗೆ ಕೊಡಲಾಗುವುದಿಲ್ಲ, ಪ್ರತಿ ತಿಂಗಳು ತಲುಪಿಸಿತ್ತೇನೆ ಎಂದು ತಿಳಿಸಿದ್ದೆ. ಅದೆಲ್ಲವೂ ಸುಳ್ಳಾ ? ಎಚ್.ವಿಶ್ವನಾಥ್ ಚಾಮುಂಡೇಶ್ವರಿ ಗೆ ಪೂಜೆ ಮಾಡಿ ಸತ್ಯ ಮಾಡಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.
Comments are closed.