ಕರ್ನಾಟಕ

ಕೆ.ಆರ್.ಪೇಟೆ ತಾಲೂಕಿನಲ್ಲಿ ಧಾರಾಕಾರ ಮಳೆಗೆ; ಓರ್ವ ಸಾವು, ಸಾವಿರಾರು ಎಕರೆ ಬೆಳೆ ನಾಶ

Pinterest LinkedIn Tumblr


ಮಂಡ್ಯ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಲ್ಲಿ ನೆನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಮಳೆಯ ರೌದ್ರನರ್ತನಕ್ಕೆ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ, ನಾಲ್ಕು ಕೆರೆಗಳ ಏರಿ ಒಡೆದು ಸಾವಿರಾರು ಎಕರೆಯ ಬೆಳೆ ಸಂಪೂರ್ಣ ನಾಶವಾಗಿದೆ.

ಅಲ್ದೆ ಗಂಜಿಗೆರೆ ಬಳಿ ಭಾರಿ ಮಳೆಗ ಮನೆ ಕುಸಿದು ಕುಮಾರ್ ಎಂಬ ರೈತರೊಬ್ಬರು ಮೃತಪಟ್ಟಿದ್ದಾರೆ. ತಾಲೂಕಿನ ಹಲವಡೆ ಮಳೆಗೆ ಮನೆಗಳು ಕುಸಿದಿವೆ. ತಾಲೂಕು ಆಡಳಿತ ಸಾಕಷ್ಟು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದು, ಬೆಳೆ ನಾಶವಾಗಿರುವ ರೈತರಿಗೆ ವರದಿ‌ ಆಧಿರಿಸಿ ಪರಿಹಾರ ನೀಡುವ ಭರವಸೆ ನೀಡಿದೆ.

ಶೀಳನೆರೆಯ ಹೋಬಳಿ ವ್ಯಾಪ್ತಿಯ ರಾಯಸಮುದ್ರ, ಸಿಂಧಘಟ್ಟ, ಹರಹಳ್ಳಿ ಕೆರೆಯ ಏರಿಗಳು ಒಡೆದ ಪರಿಣಾಮ ಆ ಭಾಗದ ಚನ್ನಾಪುರ, ಬ್ಯಾಲದ ಕೆರೆ, ಸಿಂಧಘಟ್ಟ ಸೇರಿದಂತೆ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ರೈತರ ಜಮೀನಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಬೆಳೆ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ತಾಲೂಕು ಆಡಳಿತವನ್ನುವನ್ನು ಒತ್ತಾಯಿಸಿದ್ದಾರೆ.

ಕೆ.ಆರ್.ಪೇಟೆ ಶೀಳನೆರೆ ಭಾಗದ ಪ್ರಮುಖ ಕೆರೆಯಾಗಿರುವ ರಾಯಸಮುದ್ರದ ಕೆರೆ ಕೋಡಿ ಬಿದ್ದಿದ್ದು, ಅಪಾಯದ ಸ್ಥಿತಿಯಲ್ಲಿದೆ.‌ ಸ್ಥಳಕ್ಕೆ ತಹಶೀಲ್ದಾರ್, ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆರೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಮಳೆ ಯಥಾಸ್ಥಿತಿಯಲ್ಲಿ ಮುಂದುವರೆದರೆ ರಾಯಸಮುದ್ರ ಕೆರೆ ಒಡೆಯುವ ಸಾಧ್ಯತೆ ಇದ್ದು, ಮತ್ತಷ್ಟು ಅನಾಹುತವಾಗುವ ಬಗ್ಗೆ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಎಚ್ಚರಿಕೆ ನೀಡಿದ್ದಾರೆ.

ಮೂರು ಕೆರೆಗಳ ಏರಿ ಒಡೆದ ಕಾರಣ ರೈತರ ಸಾವಿರಾರು ಎಕರೆ ಜಮೀನು ಜಲವೃತವಾಗಿದ್ದು, ಬೆಳೆ ನಾಶವಾಗಿದೆ‌. ಇನ್ನು ಹಲವೆಡೆ ಸೇತುವೆ ಮತ್ತು ರಸ್ತೆಗಳು ಕೂಡ ಕೊಚ್ಚಿಹೋಗಿವೆ. ಜೊತೆಗೆ ಹಳ್ಳಕೊಳ್ಳದಲ್ಲಿ ಭಾರೀ ನೀರು ಹರಿದ ಕಾರಣ ತೊರೆಗಳು ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದ್ದು ಬಹುತೇಕ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಕೆ.ಆರ್.ಪೇಟೆಯ ಮುರುಕನಹಳ್ಳಿ ಬಳಿ ರಸ್ತೆ ಮೇಲೆ ಭಾರೀ ಪ್ರಮಾಣದ ನೀರು ಸೇತುವ ಮೇಲೆ ಹರಿದ ಕಾರಣ ಮೈಸೂರು-ಚನ್ನರಾಯಪಟ್ನ ಹೆದ್ದಾರಿ ಸಂಚಾರ ಬಂದ್ ಆಗಿತ್ತು. ಇದರ ಜೊತೆಗೆ ಚನ್ನಾಪುರ ಬ್ಯಾಲದ ಕೆರೆ ಬಳಿ ಕೂಡ ಸೇತುವೆ ಮುಳುಗಡೆಯಾಗಿ, ಗ್ರಾಮೀಣ ಭಾಗದ ಸಂಪರ್ಕ ಕಡಿತಗೊಂಡಿತ್ತು. ಹಳ್ಳಗಳಲ್ಲಿ ಭಾರೀ ಪ್ರಮಾಣದ ನೀರಿ ಹರಿದ ಕಾರಣ ರಸ್ತೆ ಮತ್ತು ಹಲವು ಸೇತುವೆಗಳು‌ ಕೊಚ್ಚಿ ಹೋಗಿವೆ.

ಸಿ.ಎಂ ಬಿಎಸ್​ವೈ ಮನೆ ದೇವರಾದ ಕಾಪು ಮಠಕ್ಕೂ ನೀರು ನುಗ್ಗಿದ್ದು, ಸ್ವತಂತ್ರ ಸಿದ್ದೇಶ್ವರ ಸ್ವಾಮಿ ದೇವಾಲಯ ಸಂಪೂರ್ಣ ಜಲಾವೃತವಾಗಿದೆ. ದೇವಸ್ಥಾನ ಜಲಾವೃತವಾದ ಕಾರಣ ದೇವಾಲಯದ ಪೂಜೆ ಸ್ಥಗಿತಗೊಂಡಿದೆ. ರಾತ್ರಿ ಸುರಿದ ಮಳೆ ಮಳೆಯಿಂದಾ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು, ಹಲವೆಡೆ ರೈತರ ಜಮೀನು ಕೊಚ್ಚಿಹೋಗಿದೆ. ನೂರಾರು ಎಕರೆಯಲ್ಲಿ ಫಸಲಿಗೆ ಬಂದಿದ್ದ ಬೆಳೆ ನಾಶವಾಗಿ, ರೈತರು ಕಂಗಾಲಾಗಿದ್ದಾರೆ.

Comments are closed.