ಬ್ಯಾಂಕ್ ಕೆಲಸಗಳಿದ್ದರೆ ಅದನ್ನು ನಾಳೆ ಅಂದ್ರೆ ಶುಕ್ರವಾರವೆ ಮುಗಿಸಿ. ಸೋಮವಾರ ಮಾಡೋಣ, ಮಂಗಳವಾರ ಮಾಡಿದ್ರೆ ಆಯ್ತು ಅಂತ ಕೆಲಸ ಮುಂದೂಡಬೇಡಿ. ಯಾಕೆಂದ್ರೆ ದೀಪಾವಳಿ ಹಿನ್ನೆಲೆಯಲ್ಲಿ ಬ್ಯಾಂಕ್ ನಾಲ್ಕು ದಿನ ಬಾಗಿಲು ತೆರೆಯುವುದಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಬೇರೆ ಬೇರೆಯಿದೆ. ಆರ್.ಬಿ.ಐ. ಇದಕ್ಕೆ ಸಂಬಂಧಿಸಿದ ಮಾಹಿತಿ ಬಿಡುಗಡೆ ಮಾಡಿದೆ.
ಅಕ್ಟೋಬರ್ 26, ತಿಂಗಳ ನಾಲ್ಕನೇ ಶನಿವಾರವಾದ ಕಾರಣ ಬ್ಯಾಂಕ್ ಗೆ ರಜೆ. ಭಾನುವಾರ ಎಲ್ಲ ಬ್ಯಾಂಕ್ ಗಳು ಎಂದಿನಂತೆ ಬಾಗಿಲು ಮುಚ್ಚಿರುತ್ತವೆ. ಇನ್ನು ಸೋಮವಾರ ಅಕ್ಟೋಬರ್ 26 ರಂದು ಕೆಲ ರಾಜ್ಯಗಳ ಬ್ಯಾಂಕ್ ಗೆ ರಜೆ ಘೋಷಣೆ ಮಾಡಲಾಗಿದೆ.
ಮಂಗಳವಾರವೂ ಕೆಲ ರಾಜ್ಯಗಳ ಬ್ಯಾಂಕ್ ಕೆಲಸ ಮಾಡುವುದಿಲ್ಲ. ಮಂಗಳವಾರ ಬೆಂಗಳೂರಿನಲ್ಲೂ ಬ್ಯಾಂಕ್ ಗಳು ಬಾಗಿಲು ಮುಚ್ಚಿರುತ್ತವೆ. ಆರ್.ಬಿ.ಐ. ರಜಾ ಪಟ್ಟಿಯನ್ನು ತನ್ನ ಅಧಿಕೃತ ವೆಬ್ ಸೈಟ್ https://www.rbi.org.in/Scripts/HolidayMatrixDisplay.aspx ನಲ್ಲಿ ಬಿಡುಗಡೆ ಮಾಡಿದೆ. ಅದನ್ನು ನೋಡಿ ನಿಮ್ಮ ಬ್ಯಾಂಕ್ ಕೆಲಸದ ಪ್ಲಾನ್ ಮಾಡಿ.
Comments are closed.