ಕರ್ನಾಟಕ

ಕಾಡುಕುರಿ ನುಂಗಿದ್ದ ಬೃಹತ್ ಹೆಬ್ಬಾವು ಸೆರೆ

Pinterest LinkedIn Tumblr


ಚಿಕ್ಕಮಗಳೂರು: ಕಾಡುಕುರಿಯನ್ನು ನುಂಗಿ ಮಲಗಿದ್ದ ಬೃಹತ್ ಹೆಬ್ಬಾವನ್ನು ಕೊಪ್ಪ ತಾಲೂಕಿನ ವಗಳೆ ನಾಗರಾಜ್ ಕಾಫಿ ತೋಟದಲ್ಲಿ ಸೆರೆಯಿಡಿಯಲಾಗಿದೆ.

ಹೆಬ್ಬಾವನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದು ಉರಗ ತಜ್ಞ ಹರೀಂದ್ರರವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಹರೀಂದ್ರರವರು ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸುಮಾರು 75 ಕೆ.ಜಿ. ತೂಕವಿದ್ದ ಬೃಹತ್ ಹೆಬ್ಬಾವನ್ನು ಸೆರೆಯಿಡಿದಿದ್ದಾರೆ.

ಸೆರೆ ಸಿಕ್ಕ ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.

Comments are closed.