ಪುರಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಇದರಿಂದಾಗಿ ಚಂಡಮಾರುತ ಏಳುವ ಸಾಧ್ಯತೆಯಿದೆ. ಇದರಿಂದಾಗಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೂಚನೆ ನೀಡಿದೆ.
ಈ ಬಾರಿ ದೇಶದ ಕರಾವಳಿ ತೀರಕ್ಕೆ ಒಂದರ ಮೇಲೊಂದು ಚಂಡಮಾರುತಗಳು ಬಾಧಿಸುತ್ತಿವೆ. ಭಾರತದ ಪೂರ್ವ ಕರಾವಳಿಗೆ ಬುಲ್ ಬುಲ್ ಚಂಡಮಾರುತದ ಭೀತಿ ಎದುರಾಗಿದೆ. ಒಡಿಶಾದ ಸುಮಾರು 14 ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಪಶ್ಚಿಮ ಕರಾವಳಿಯಲ್ಲಿ ಮಹಾ ಚಂಡಮಾರುತ ಭೀತಿ ಎದುರಾಗಿತ್ತು, ಆದರೆ ಇದೀಗ ಮಹಾ ಚಂಡಮಾರುತ ವೇಗ ಕಡಿಮೆಯಾಗಿದ್ದು, ಗಂಟೆಗೆ ೧೦ ಕಿ.ಮೀ ವೇಗದಲ್ಲಿ ಚಲಿಸಲಿದೆ. ಇನ್ನು ಕೇವಲ ೧೨ ಗಂಟೆ ಮಾತ್ರ ಈ ಪರಿಣಾಮ ಮಳೆಯಾಗಲಿದೆ ಎನ್ನಲಾಗುತ್ತಿತ್ತು. ಚಂಡಮಾರುತ ಗುಜರಾತ್ ಕಡೆ ಸಾಗಿರುವುದರಿಂದ ಭಾವನಗರ, ಸೂರತ್, ಬರೂಚ್ , ಆನಂದ್ ಮೊದಲಾದ ಪ್ರದೇಶಗಳಲ್ಲಿ ೧೨ ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ.
ಬುಲ್ ಬುಲ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿ ಮೂಲಕ ಹಾದು ಹೋಗಲಿದೆ. ಬುಲ್ ಬುಲ್ ಪರಿಣಾಮ ಒಡಿಶಾದಲ್ಲೂ ಭಾರಿ ಮಳೆಯಾಗಲಿದ್ದು, ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.
Comments are closed.