ಕರ್ನಾಟಕ

ಕಲಬುರಗಿ ಜನರಿಗೆ ಸ್ಟಾರ್ ಏರ್‌ನಿಂದ ಸಿಹಿ ಸುದ್ದಿ : ಶೀಘ್ರದಲ್ಲೇ ವಿಮಾನ ಸೇವೆ ಆರಂಭ.

Pinterest LinkedIn Tumblr

ಕಲಬುರಗಿ : ಕಲಬುರಗಿ ಜಿಲ್ಲೆಯ ಜನರಿಗೆ ಸ್ಟಾರ್ ಏರ್ ಸಿಹಿ ಸುದ್ದಿ ಕೊಟ್ಟಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರಕ್ಕೆ ನವೆಂಬರ್ 1ರಂದು ಒಪ್ಪಿಗೆ ಸಿಕ್ಕಿತ್ತು.

ಸ್ಟಾರ್ ಏರ್ ಬೆಂಗಳೂರು- ಕಲಬುರಗಿ-ತಿರುಪತಿ ನಡುವೆ ಶೀಘ್ರದಲ್ಲೇ ವಿಮಾನ ಸೇವೆಯನ್ನು ಆರಂಭಿಸಲಿದೆ. ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ಸೇರ್ಪಡೆಗೊಂಡಿದೆ.

“ಬೆಂಗಳೂರು-ಕಲಬುರಗಿ-ತಿರುಪತಿ ನಡುವಿನ ವಿಮಾನ ಸೇವೆಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸಲಾಗಿ ದೆ ” ಎಂದು ಸ್ಟಾರ್ ಏರ್ ಸಂಸ್ಥಾಪಕ ಸಂಜಯ್ ಘೋಡಾವತ್ ಹೇಳಿದ್ದಾರೆ.

175.57 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ನವೆಂಬರ್ 1 ರಿಂದಲೇ ವಾಣಿಜ್ಯ ಸಂಚಾರ ಆರಂಭಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಗೆ ನೀಡಿತ್ತು.

2018ರ ಆಗಸ್ಟ್‌ 26ರಂದು ಪ್ರಾಯೋಗಿಕವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹಾರಾಟ ನಡೆಸಲಾಗಿತ್ತು. 742.23 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.

ಏರ್ ಬಸ್‌ ನಂತಹ ಬೃಹತ್ ವಿಮಾನಗಳು ಸಹ ಬಂದಿಳಿಯಲು ಅನುಕೂಲವಾಗುವಂತೆ 3,725 ಉದ್ದದ ರನ್‌ ವೇಯನ್ನು ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಟಾರ್ ಏರ್ ವಿಮಾನ ಮೊದಲ ಬಾರಿಗೆ ಇಲ್ಲಿಂದ ಸಂಚಾರ ನಡೆಸುವ ಸಾಧ್ಯತೆ ಇದೆ.

Comments are closed.