ಬೆಂಗಳೂರು : ಬೀದಿ ನಾಯಿಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಏರ್‌ಗನ್ ಬಳಸಿ ಬೀದಿನಾಯಿಯ ಮೇಲೆ ಗುಂಡು ಹಾರಿಸಲಾಗಿದೆ, ಗಾಯಗೊಂಡಿರುವ ನಾಯಿಯನ್ನು ತಕ್ಷಣವೇ ಪಶು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫೈರಿಂಗ್ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
2012ರ ಬಳಿಕ ಮತ್ತೊಮ್ಮೆ ಬಿಬಿಎಂಪಿಯಿಂದ ಬೀದಿ ನಾಯಿ ಗಣತಿ
ಬೀದಿ ನಾಯಿಯ ಮೇಲೆ ಏಕೆ ಗುಂಡು ಹಾರಿಸಿದ್ದಾರೆ ಎನ್ನುವ ಪ್ರಶ್ನೆ ಎದುರಾಗಿದೆ. ಒಂದೊಮ್ಮೆ ನಾಯಿ ಕಚ್ಚಲು ಬಂದರೂ ಕೂಡ ಹಾಗೆಯೇ ಓಡಿಸಬಹುದು, ದುಷ್ಕರ್ಮಿಗಳು ಏರ್‌ಗನ್ ಇಟ್ಟುಕೊಂಡು ಏಕೆ ಓಡಾಡುತ್ತಿದ್ದರು, ಮೂಕ ಪ್ರಾಣಿಯ ಗುಂಡು ಹಾರಿಸಲು ಕಾರಣವೇನೆಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂರು ಗುಂಡುಗಳು ಹೊಟ್ಟೆ ಸೇರಿರುವ ಕಾರಣ, ನಾಯಿ ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ.
ಪ್ರಾಣಿಪ್ರಿಯ ಪ್ರವೀಣ್ ಎಂಬುವವರು ನಾಯಿಯನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಶ್ಯಾಮಸುಂದರ್ ಎನ್ನುವ ವೃದ್ಧರೊಬ್ಬರು ನಾಯಿಯ ಮೇಲೆ ಗುಂಡು ಹಾರಿಸಿದ್ದರು. ನಾಯಿ ಕಾಟದಿಂದ ಬೇಸತ್ತು ಗುಂಡು ಹಾರಿಸಿದ್ದರು. ಪ್ರಕರಣದ ಸಂಬಂಧ ರೋಪಿಯನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಿದೆ, ಬಿಬಿಎಂಪಿಯೂ ಕೂಡ ಅವೆಲ್ಲಕ್ಕೂ ಇಂಜೆಕ್ಷನ್ ನೀಡಿ, ನಾಯಿಗಳ ಸಂತತಿ ಕಡಿಮೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೂ ಸಂತತಿ ಕಡಿಮೆಯಾದಂತೆ ಕಾಣುತ್ತಿಲ್ಲ, ಮಕ್ಕಳ ಮೇಲೆ, ಸಾರ್ವಜನಿಕರ ಮೇಲೆ ಬೀದಿ ನಾಯಿಗಳಿಂದ ದಾಳಿ ಮುಂದುವರೆದಿದೆ.
Comments are closed.