ಕರ್ನಾಟಕ

ಇಂಡಿ ತಾಲೂಕಿನ ಕೆಲವೆಡೆ ಭೂಮಿ ಆಳದಿಂದ ದೊಡ್ಡ ಶಬ್ದ : ಜನರಲ್ಲಿ ಅತಂಕ

Pinterest LinkedIn Tumblr

ಕಲಬುರ್ಗಿ : ಉತ್ತರ ಕರ್ನಾಟಕದ ಜನತೆ ಇಂದು ಮಧ್ಯಾಹ್ನ ಎಂದಿನಂತೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ದೊಡ್ಡ ಶಬ್ದವೊಂದು ಭೂಮಿಯಾಳದಿಂದ ಎಲ್ಲರ ಕಿವಿಗೆ ಅಪ್ಪಳಿಸಿತ್ತು. ಭೂಮಿ ಕಂಪಿಸುತ್ತಿದೆ ಎಂದು ಭಾವಿಸಿ ಎಲ್ಲರೂ ಒಮ್ಮೆ ದಂಗಾಗಿಬಿಟ್ಟರು.

ಕಲಬುರ್ಗಿಯ ಅಫಜಲಪುರ ಮತ್ತು ವಿಜಯಪುರ ಜಿಲ್ಲೆ ಆಲಮೇಲ್, ಇಂಡಿ ತಾಲೂಕಿನ ಕೆಲವೆಡೆ ಭೂಮಿ ಆಳದಿಂದ ಶಬ್ದ ಕೇಳಿದೆ. ಶಬ್ದ ಕೇಳಿ ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವರು ಭೂಕಂಪವಾಯಿತು ಎಂದು ಭಾವಿಸಿದ್ದರು.

ಆದರೆ ಎಲ್ಲಿಯೂ ಭೂಮಿ ನಡುಗಿಲ್ಲ. ಆಲಮಟ್ಟಿ, ಕಲಬುರ್ಗಿ, ರಾಯಚೂರು, ಬೆಂಗಳೂರು ಭೂಕಂಪ ಮಾಪನ ಕೇಂದ್ರಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ಯಾವುದೇ ದಾಖಲೆ ಇಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಸಹಾಯಕ ಸಂತೋಷ ಸ್ಪಷ್ಟನೆ ನೀಡಿದ್ದು, ‘ಭೂಮಿ ಕಂಪಿಸಿದ ಬಗ್ಗೆ ಎಲ್ಲಿಯೂ ಮಾಹಿತಿ ದಾಖಲಾಗಿಲ್ಲ. ಜನ ಆತಂಕ ಪಡುವ ಅಗತ್ಯವಿಲ್ಲ. ಶಬ್ದ ಯಾವ ಕಾರಣಕ್ಕೆ ಬಂತು ಎನ್ನುವುದನ್ನು ಪತ್ತೆ ಹಚ್ಚುತ್ತೇವೆ,’ ಎಂದಿದ್ದಾರೆ.

ಕರ್ನಾಟಕದಲ್ಲಿ ಭೂಮಿ ಕಂಪಿಸಿದ ಉದಾಹರಣೆ ತುಂಬಾನೇ ಕಡಿಮೆ. ಅದರಲ್ಲೂ ಪ್ರಾಣಹಾನಿ ಉಂಟಾದ ಯಾವುದೇ ಉದಾಹರಣೆ ಇಲ್ಲ. ಹೀಗಾಗಿ, ಉತ್ತರ ಕರ್ನಾಟಕದ ಜನರು ಭಯಪಡಬೇಕಾದ ಅಗತ್ಯವಿಲ್ಲ.

Comments are closed.