ವಿಶ್ವದ ಜನಪ್ರಿಯ ಮೆಸೆಜಿಂಗ್ ಆಪ್ ‘ವಾಟ್ಸಪ್’ ಪ್ರಸ್ತುತ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ಬಳಕೆದಾರರ ಈಗಾಗಲೇ ಹತ್ತು ಹಲವು ನೂತನ ಫೀಚರ್ಸ್‌ಗಳನ್ನು ಪರಿಚಯಿಸಿರುವ ಸಂಸ್ಥೆಯು ಇತ್ತೀಚಿಗೆ ಫಿಂಗರ್‌ಪ್ರಿಂಟ್ ಲಾಕ್ ಸೌಲಭ್ಯ ನೀಡಿದೆ. ಅದಾಗ್ಯೂ ಬಳಕೆದಾರರ ಖಾತೆಗೆ ಇನ್ನಷ್ಟು ಭದ್ರತೆ ಒದಗಿಸುವ ಉದ್ದೇಶದಿಂದ ಇದೀಗ ಮತ್ತೆ ಹೊಸದೊಂದು ಪ್ರೈವೆಸಿ ಫೀಚರ್ ಅನ್ನು ಅಳವಡಿಸಿದೆ. ಹಾಗೆಯೇ ಈ ಫೀಚರ್ ಬಳಕೆದಾರರಿಗೆ ಇನ್ನೊಂದು ಅವಕಾಶ ಒದಗಿಸಲಿದೆ.
ವಾಟ್ಸಪ್
ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಅಪ್ಲಿಕೇಶನ್ ಈಗ ‘ರಿಜಿಸ್ಟ್ರೆಷನ್ ನೋಟಿಫಿಕೇಶನ್’ ಹೆಸರಿನ ನೂತನ ಫೀಚರ್ ಅನ್ನು ಅಳವಡಿಸುವುದಾಗಿ ಸೂಚನೆ ಹೊರಹಾಕಿದೆ. ಈ ಫೀಚರ್ ಬಳಕೆದಾರರಿಗೆ ಎರಡು ಪ್ರಯೋಜನಗಳನ್ನು ನೀಡಲಿದೆ. ಮಾಲ್ವೇರ್ ಮತ್ತು ಹ್ಯಾಕ್ ಸಾಧ್ಯತೆಗಳ ತಡೆಗೆ ನೆರವಾಗಲಿದೆ ಹಾಗೂ ಸೆಕೆಂಡ್ ಅಕೌಂಟ್ ತೆರೆಯಲು ಅನುಕೂಲವಾಗಲಿದೆ. ಹಾಗಾದರೇ ರಿಜಿಸ್ಟ್ರೆಷನ್ ನೋಟಿಫಿಕೇಶನ್ ಫೀಚರ್ ಕುರಿತಾಗಿ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಏನಿದು ರಿಜಿಸ್ಟ್ರೆಷನ್ ನೋಟಿಫಿಕೇಶನ್ ಫೀಚರ್?
ವಾಟ್ಸಪ್ ಸಂಸ್ಥೆಯ ಈ ರಿಜಿಸ್ಟ್ರೆಷನ್ ನೋಟಿಫಿಕೇಶನ್ ಫೀಚರ್ ಬಳಕೆದಾರರ ಖಾತೆಗೆ ಸುರಕ್ಷೆ ನೀಡುವುದಾಗಿದೆ. ಇತರೆ ಡಿವೈಸ್‌ಗಳಲ್ಲಿ ವಾಟ್ಸಪ್ ಬಳಕೆದಾರರ ಖಾತೆಯನ್ನು ಯಾರಾದರೂ ತೆರೆಯಲು ಪ್ರಯತ್ನಿಸಿದರೇ, ಬಳಕೆದಾರರಿಗೆ ಪುಶ್ ನೋಟಿಫಿಕೇಶನ್ ಮೂಲಕ ಮಾಹಿತಿ ದೊರೆಯುತ್ತದೆ. ಹಾಗೆಯೇ ಇತರೆ ಯಾವುದೇ ಬಗೆಯ ಮಾಲ್ವೇರ್ ಚಟುವಟಿಕೆಗಳಿಂದ ಬಳಕೆದಾರರ ವಾಟ್ಸಪ್ ಖಾತೆಗೆ ಈ ಫೀಚರ್ ಸೆಫ್ಟಿ ನೀಡಲಿದೆ.
ನೋಟಿಫಿಕೇಶನ್ ಕೋಡ್
ಬಳಕೆದಾರರ ರಿಜಿಸ್ಟರ್ ಮೊಬೈಲ್ ನಂಬರ್ ಬಳಸಿ ಇತರೆ ಸ್ಮಾರ್ಟ್‌ಫೋನ್ ಅಥವಾ ಡಿವೈಸ್‌ಗಳಲ್ಲಿ ಯಾರಾದರೂ ವಾಟ್ಸಪ್ ಖಾತೆ ಓಪೆನ್ ಮಾಡುವ ಪ್ರಯತ್ನ ನಡೆಸಿದರೇ, ವಾಟ್ಸಪ್ ಬಳಕೆದಾರರಿಗೆ (WhatsApp registration code was requested for your phone number) ನೋಟಿಫಿಕೇಶನ್ ಕಳುಹಿಸುತ್ತದೆ. ಒಂದು ವೇಳೆ ಬಳಕೆದಾರರ ವಾಟ್ಸಪ್ ಖಾತೆಯನ್ನು ಇನ್ನೊಂದು ಡಿವೈಸ್‌ನಲ್ಲಿ ತೆರೆದಾಗ, ಬಳಕೆದಾರರ ಹಿಂದಿನ ಚಾಟ್ ಹಿಸ್ಟರಿ ಸೆಕೆಂಡ್ ಅಕೌಂಟ್‌ನಲ್ಲಿ ಲಭ್ಯವಾಗುವುದಿಲ್ಲ. ಏಕೆಂದರೇ ಬಳಕೆದಾರರ ವಾಟ್ಸಪ್ ಚಾಟ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್‌ನಿಂದಾಗಿ ಸುರಕ್ಷತೆ ಪಡೆದಿರುತ್ತವೆ.
ಎರಡು ವಾಟ್ಸಪ್ ಖಾತೆ
ರಿಜಿಸ್ಟ್ರೆಷನ್ ನೋಟಿಫಿಕೇಶನ್ ಫೀಚರ್ ನೆರವಿನಿಂದ ಬಳಕೆದಾರರು ಎರಡು ಡಿವೈಸ್‌ಗಳಲ್ಲಿ ಅವರ ವಾಟ್ಸಪ್ ಖಾತೆ ಬಳಸಬಹುದಾಗಿದೆ. ಸೆಕೆಂಡ್ ಡಿವೈಸ್‌ನಲ್ಲಿ ಈಗಾಗಲೇ ರಿಜಿಸ್ಟರ್ ಆಗಿರುವ ಫೋನ್ ನಂಬರ್ ಅನ್ನು ನಮೂದಿಸಿದಾಗ ಬಳಕೆಅದರರಿಗೆ ನೋಟಿಫಿಕೇಶನ್ ಕೋಡ್ ಮೆಸೆಜ್ ಲಭ್ಯವಾಗುತ್ತದೆ. ಆ ಕೋಡ್ ಎಂಟ್ರಿ ಮಾಡುವ ಮೂಲಕ ಬಳಕೆಅದರರು ಎರಡನೇ ಖಾತೆಗೆ ಲಾಗ್ ಇನ್ ಆಗಬಹುದಾಗಿದೆ.
ಐಫೋನ್ ಆವೃತ್ತಿ
ಬಳಕೆದಾರರ ಖಾತೆಗೆ ಸೆಕ್ಯುರಿಟಿ ಒದಗಿಸುವ ರಿಜಿಸ್ಟ್ರೆಷನ್ ನೋಟಿಫಿಕೇಶನ್ ಫೀಚರ್ ಆರಂಭದಲ್ಲಿ ಐಫೋನ್ ಆವೃತ್ತಿಯ ಪ್ರಾಯೋಗಿಕ ಹಂತದಲ್ಲಿ ಸೇರಿದೆ. ಐಫೋನ್ ಬಳಕೆದಾರರು ಆಪ್ ಸ್ಟೋರ್‌ನಲ್ಲಿ ವಾಟ್ಸಪ್ ಅನ್ನು ಅಪ್‌ಡೇಟ್ ಮಾಡಿ ಈ ಫೀಚರ್ ಪಡೆಯಬಹುದಾಗಿದೆ. ಆದ್ರೆ ಈ ಫೀಚರ್ ಆಂಡ್ರಾಯ್ಡ್ ಆವೃತ್ತಿಗೆ ಯಾವಾಗ ಸೇರುತ್ತದೆ ಎನ್ನುವ ಮಾಹಿತಿ ಹೊರಹಾಕಿಲ್ಲ.
Comments are closed.