ಕರ್ನಾಟಕ

ತನ್ವೀರ್ ಸೇಠ್ ಗನ್ ಮ್ಯಾನ್ ಫೈರೋಜ್ ಖಾನ್ ಅಮಾನತು

Pinterest LinkedIn Tumblr

ಮೈಸೂರು : ನಗರ ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿದ್ದ ಶಾಸಕ ತನ್ವೀರ್ ಸೇಠ್ ಮೇಲೆ ಆರೋಪಿ ಫರಾನ್ ಎಂಬಾತ ಕೊಲೆ ಯತ್ನ ನಡೆಸಿದ್ದನು. ಈ ಸಂಬಂಧ ತನ್ವೀರ್ ಸೇಠ್ ಗನ್ ಮ್ಯಾನ್ ಫೈರೋಜ್ ಖಾನ್ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದಡಿ ಅಮಾನತು ಮಾಡಲಾಗಿದೆ.

ಶಾಸಕ ತನ್ವೀರ್ ಸೇಠ್ ಕೊಲೆ ಯತ್ನದ ಹಿಂದಿನ ರಹಸ್ಯವನ್ನು ಭೇದಿದಸಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಈ ವೇಳೆ ಆರೋಪಿ ಫರಾನ್ ಸ್ನೇಹಿತರು ಹೆಸರು ಗಳಿಸುವ ಸಲುವಾಗಿ ಕೊಲೆ ಯತ್ನ ನಡೆಸಿದ್ದಾನೆ ಎಂಬ ಸ್ಪೋಟಕ ಮಾಹಿತಿಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದರು.

ಈ ಎಲ್ಲಾ ಬೆಳವಣಿಗೆ ನಂತ್ರ, ಶಾಸಕ ತನ್ವೀರ್ ಸೇಠ್ ಮೇಲೆ ಆರೋಪಿ ಫರಾನ್ ಕೊಲೆ ಯತ್ನ ನಡೆಸಿದ ಸಂದರ್ಭದಲ್ಲಿ, ಶಾಸಕರ ರಕ್ಷಣೆಗಾಗಿ ಗನ್ ಮ್ಯಾನ್ ಫೈರೋಜ್ ಖಾನ್ ದಾವಿಸಿ, ರಕ್ಷಣೆ ಮಾಡಬೇಕಿತ್ತು. ಆದ್ರೇ ಹೀಗೆ ಮಾಡದೇ ಕರ್ತವ್ಯ ಲೋಪ ಎಸಗಿದ್ದಾರೆ. ಹೀಗಾಗಿ ಸಿಎಆರ್ ಪೇದೆ ಫೈರೋಜ್ ಖಾನ್ ಅವರ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನ ಪ್ರಕರಣದಲ್ಲಿ ತೋರಿ ಬರುತ್ತಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ನಗರ ಸಶಸ್ತ್ರ ಮೀಸಲು ಪಡೆ ಡಿಸಿಪಿ ಆದೇಶ ಹೊರಡಿಸಿ, ತಿಳಿಸಿದ್ದಾರೆ.

Comments are closed.