ಕರ್ನಾಟಕ

ಚಂಡಮಾರುತ; ರಾಜ್ಯದಲ್ಲಿ ಜೋರಾಗುತ್ತಿದೆ ಚಳಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಚಳಿಗಾಲದ ಆರಂಭದಲ್ಲೇ ತಾಪಮಾನ ವೇಗವಾಗಿ ಇಳಿಕೆಯಾಗುತ್ತಿದೆ. ಬೀದರ್‌ನಲ್ಲಿ 11 ಡಿಗ್ರಿ, ಆಗುಂಬೆಯಲ್ಲಿ 10 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ ಇಳಿಕೆಯಾಗಿದೆ. ಬೀದರ್‌ನಲ್ಲಿ ಶನಿವಾರ 11.6 ಡಿಗ್ರಿ ಹಾಗೂ ಆಗುಂಬೆಯಲ್ಲಿ 10.9 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, ತೀವ್ರವಾದ ಚಳಿ ಕಂಡು ಬಂದಿದೆ. ಬೀದರ್‌ನಲ್ಲಿವಾಡಿಕೆಗೆ ಹೋಲಿಸಿದರೆ ಕನಿಷ್ಠ ತಾಪಮಾನ 4.1 ಡಿಗ್ರಿಯಷ್ಟು ಇಳಿದಿದೆ.

ಅಲ್ಲಲ್ಲಿ ಮಳೆ

ಈ ನಡುವೆ, ಅರಬ್ಬೀ ಸಮುದ್ರದಲ್ಲಿ ‘ಪವನ್‌’ ಚಂಡಮಾರುತದಿಂದ ಕರಾವಳಿಯಲ್ಲಿ ಅಲೆಗಳಬ್ಬರ ಜೋರಾಗಿದೆ. ಅರಬ್ಬೀ ಸಮುದ್ರದಲ್ಲಿ ಮತ್ತೊಂದು ವಾಯುಭಾರ ಕುಸಿತ ಕಂಡು ಬಂದಿದ್ದು, ಇದರ ಪರಿಣಾಮದಿಂದ ದಕ್ಷಿಣ ಒಳನಾಡಿನ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಚದುರಿದಂತೆ ತುಂತುರು ಮಳೆ ಸುರಿದಿದೆ. ಕರಾವಳಿಯಲ್ಲಿ ಅಲೆಗಳಬ್ಬರ ಜೋರಾಗಿರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Comments are closed.