ಕರ್ನಾಟಕ

ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ ಹೆಬ್ಬಾರ್ ಗೆಲುವು; ಜಯದ ಖಾತೆ ತೆರೆದ BJP

Pinterest LinkedIn Tumblr

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ಭರ್ಜರಿಯಾಗಿ ಗೆಲುವು ಕಂಡಿದ್ದಾರೆ. 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದುಕೊಂಡಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಸೋಲು ಕಂಡಿದ್ದಾರೆ .

ಈ ಹಿಂದೆ ಬಿಜೆಪಿಯಲ್ಲಿದ್ದು ಕಾಂಗ್ರೆಸ್‌ ಸೇರಿ ಎರಡು ಬಾರಿ ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತೆ ಕಮಲ ಪಾಳಯ ಸೇರಿದ್ದರು. ಇಂದು ಮತ್ತೆ ಬಿಜೆಪಿಯಿಂದ ಗೆಲವು ಕಂಡಿದ್ದಾರೆ.

ಭೀಮಣ್ಣ ನಾಯ್ಕ ಒಂದು ದಶಕದಿಂದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು. ಎರಡು ಬಾರಿ ಶಿವರಾಮ ಹೆಬ್ಬಾರರು ಗೆದ್ದಾಗಲೂ ಅವರಿಗೆ ಹೆಗಲುಕೊಟ್ಟವರು.ಅದರೆ ಇಂದು ಇವರ ವಿರುದ್ಧ ಸೋಲು ಕಂಡಿದ್ದಾರೆ.

2008ರಲ್ಲಿ ರಚನೆಯಾದ ಯಲ್ಲಾಪುರ ಕ್ಷೇತ್ರಕ್ಕೆ ಮೊದಲ ಅವಧಿಗೆ ಬಿಜೆಪಿಯ ವಿ. ಎಸ್‌. ಪಾಟೀಲ್‌ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಶಿವರಾಮ ಹೆಬ್ಬಾರ 14 ಸಾವಿರ ಮತಗಳಿಂದ ಗೆದ್ದರು. 2018ರಲ್ಲಿ ಈ ಅಂತರ 1483ಕ್ಕೆ ಇಳಿಯಿತು. 2018ರಲ್ಲಿ ಹೆಬ್ಬಾರ ಕಾಂಗ್ರೆಸ್ ನಿಂದ 66,290 ಮತಪಡೆದು ಗೆದ್ದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಪಾಟೀಲ್ 64,807 ಮತ ಪಡೆದಿದ್ದರು.

Comments are closed.