ಕರ್ನಾಟಕ

ಆ್ಯಸಿಡ್​ ದಾಳಿಯ ಹಿಂದೆ ಮೈದುನ-ಅತ್ತಿಗೆ ಪ್ರೇಮ್​ ಕಹಾನಿ

Pinterest LinkedIn Tumblr


ಬೆಂಗಳೂರು (ಡಿ.21): ಕರ್ತವ್ಯ ನಿರತ ಮಹಿಳಾ ಕಂಡಕ್ಟರ್​ ಮೇಲೆ ನಡೆದ ಆ್ಯಸಿಡ್​ ದಾಳಿ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಅತ್ತಿಗೆ ಮೇಲೆ ಮೈದುನನೇ ಈ ಕೃತ್ಯ ಎಸಗಿದ್ದು, ಇದಕ್ಕೆ ಕಾರಣ ಇವರಿಬ್ಬರ ನಡುವಿದ್ದ ಅಕ್ರಮ ಸಂಬಂಧ ಎನ್ನಲಾಗಿದೆ.

ಕಳೆದೆರಡು ದಿನದ ಹಿಂದೆ ಬಾಗಲಗುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಕಂಡಕ್ಟರ್​ ಇಂದಿರಾ ಬಾಯಿ ಎನ್ನುವವರ ಮೇಲೆ ಸ್ಕೂಟರ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಆ್ಯಸಿಡ್​ ದಾಳಿ ನಡೆಸಿದ್ದರು. ಪರಿಣಾಮ ಬಲಭಾಗದ ಮುಖ, ಕೈ ಸೇರಿದಂತೆ ಇನ್ನಿತರ ಭಾಗಗಳಿಗೆ ಗಾಯಗೊಂಡಿದ್ದ ಅವರನ್ನು ಇಲ್ಲಿನ ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಈ ಘಟನೆಗೆ ಕಾರಣ ಏನು ಎಂದು ತನಿಖೆ ಶುರು ಮಾಡಿದ ಪೊಲೀಸರಿಗೆ ಇದು ಮೈದುನನೇ ನಡೆಸಿದ ಕೃತ್ಯ ಎಂಬ ಸಂಗತಿ ಬಯಲಾಗಿದೆ. ಪೀಣ್ಯಾದ 9ನೇ ಡಿಪೋದ ಬಿಎಂಟಿಸಿ ಬಸ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಂದಿರಾಬಾಯಿ ಜೊತೆ ಅದೇ ಡಿಪೋದಲ್ಲಿ ಅರುಣ್​ ಎಂಬ ಆಕೆಯ ಮೈದುನ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದ.

ಕೆಲವೊಮ್ಮೆ ಒಂದೇ ಬಸ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಬ್ಬರ ನಡುವೆ ಅಕ್ರಮ ಸಂಬಂಧ ಕೂಡ ಇತ್ತು. ಆದರೆ, ಇತ್ತೀಚೆಗೆ ಇಂದಿರಾ ಬಾಯಿ ಆರೋಪಿ ಅರುಣ್​ನನ್ನು ನಿರ್ಲಕ್ಷಿಸಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಬೆಳಸಿದ್ದಳು.

ಇದೇ ಕೋಪಕ್ಕೆ ಅರುಣ್​ ಇಂದಿರಾಬಾಯಿ ಮೇಲೆ ಆ್ಯಸಿಡ್​ ದಾಳಿ ಮಾಡುವ ಸಂಚು ರೂಪಿಸಿದ್ದ. ಇದಕ್ಕಾಗಿ ಎರಡೂವರೆ ತಿಂಗಳ ಹಿಂದೆಯೇ ಮೆಜೆಸ್ಟಿಕ್​ನಲ್ಲಿ ಆ್ಯಸಿಡ್​ ತಂದಿಟ್ಟಿದ್ದ ಎನ್ನಲಾಗಿದೆ.

ದಾಳಿಗೆ ಮುನ್ನ ಸ್ನೇಹಿತ ಕುಮಾರ್​ನನ್ನು ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗುವುದಾಗಿ ಸುಳ್ಳು ನೆಪ ಹೇಳಿ ಹತ್ತಿಸಿಕೊಂಡಿದ್ದಾನೆ. ಸದ್ಯ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.ಆರೋಪ ತಳ್ಳಿದ ಸಂತ್ರಸ್ತೆ ಇಂದಿರಾಬಾಯಿ

ಘಟನೆ ಕುರಿತು ಹೇಳಿಕೆ ನೀಡಿರುವ ಸಂತ್ರಸ್ತೆ ಇಂದಿರಾ ಬಾಯಿ, ನಬ್ಬಿಬ್ಬರ ನಡುವೆ ಯಾವುದೇ ಅಕ್ರಮ ಸಂಬಂಧವಿಲ್ಲ. ಅರುಣ್ ನನ್ನ ತಂಗಿಯ ಗಂಡ. ನಮ್ಮ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದ್ದಾನೆ. ಅವನು ಈ ರೀತಿ ಮಾಡುತ್ತಾನೆ ಅಂದುಕೊಂಡಿರಲಿಲ್ಲ. ಆರು ತಿಂಗಳ ಹಿಂದೆ ಅಪಘಾತವಾಗಿದ್ದಾಗ ಯಾರೋ ಅಪರಿಚಿತರು ಅಂದುಕೊಂಡಿದೆ. ನನ್ನ ಮೇಲೆ ಗೂಬೆ ಕೂರಿಸಲು ಈ ರೀತಿ ಆರೋಪ ಮಾಡುತ್ತಿದ್ದಾನೆ ಎಂದರು.

Comments are closed.