ಬೆಂಗಳೂರು: ಹೆಂಡತಿಯ ಕಾಟಕ್ಕೆ ಬೇಸತ್ತ ಪತಿ ಮಹಾಶಯರೊಬ್ಬರು ಆಕೆಯ ಹತ್ಯೆಗೆ ಸುಪಾರಿ ಕೊಟ್ಟಿದ್ದು, ಈಗ ‘ಮಾವ’ನ ಮನೆ ಸೇರಿದ್ದಾರೆ.
ಕಳೆದ ಡಿಸೆಂಬರ್ 21ರಂದು ವಿನುತಾ ಎಂಬುವರು ಮೃತಪಟ್ಟಿದ್ದರು. ಅನುಮಾನಾಸ್ಪದವಾಗಿ ವಿನುತಾ ಮೃತಪಟ್ಟಿದ್ದರು. ನಂತರ ವಿಚಾರಣೆಗೊಳಪಡಿಸಿದಾಗ ಎಲ್ಲವೂ ಬಯಲಾಗಿದೆ. ಪತಿ ಸೇರಿದಂತೆ ಮೂವರನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಗಂಡ-ಹೆಂಡತಿ ನಡುವೆ ತೀವ್ರ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ನಿಗೆ ಕೊಲೆಗೆ ಸಂಚು ರೂಪಿಸಿದ್ದ ಪತಿ ಸುಪಾರಿ ಕೂಡ ನೀಡಿದ್ದ. ಈಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
2013ರಿಂದಲೂ ಗಂಡನೊಂದಿಗೆ ಹೆಂಡತಿ ಜಗಳವಾಡುತ್ತಿದ್ದರು. ಪತಿ-ಪತ್ನಿ ಅನ್ಯೋನ್ಯತೆಯಿಂದ ಇರಲೇ ಇಲ್ಲ. ವಿಚ್ಛೇದನ ಪಡೆಯಲು ಅರ್ಜಿ ಕೂಡ ಸಲ್ಲಿಸಲಾಗಿತ್ತು.
ಹಲವಾರು ಬಾರಿ ಇಬ್ಬರ ನಡುವೆ ಜಗಳ ಕೂಡ ನಡೆದಿತ್ತು. 15ಕ್ಕೂ ಅಧಿಕ ಬಾರಿ ವೈಯಾಲಿಕಾವಲ್ ಠಾಣೆಯಲ್ಲಿ ಪತಿ-ಪತ್ನಿ ಇಬ್ಬರೂ ಪರಸ್ಪರ ದೂರು ಕೂಡ ನೀಡಿದ್ದ.
ಕಳೆದ ಶನಿವಾರ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲೇ 34 ವರ್ಷದ ಮಹಿಳೆ ವಿನುತಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.
ಬಲವಾದ ಆಯುಧದಿಂದ ತಲೆ ಮೇಲೆ ಹೊಡೆದು ವಿನುತಾ ಕೊಲೆಗೈಯ್ಯಲಾಗಿತ್ತು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿದರು.
ಗಂಡ ನರೇಂದ್ರ ಬಾಬು ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಬಯಲಾಗಿದೆ. ನರೇಂದ್ರ ಬಾಬು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Comments are closed.