ಕರ್ನಾಟಕ

‘ಮಿಸ್ ಯು ಅಮ್ಮ -ಅಪ್ಪ’ ಎಂದು ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆಗೆ ಶರಣು

Pinterest LinkedIn Tumblr


ಮಡಿಕೇರಿ: ಕಾರು ಚಾಲನೆ ಮಾಡಿಕೊಂಡು ಬದುಕು ನಡೆಸುತ್ತಿದ ಯುವಕ ಲಾಡ್ಜ್‍ನಲ್ಲಿ ನೇಣಿಗೆ ಶರಣಾಗಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

ಮಡಿಕೇರಿ ತಾಲೂಕಿನ ಕಗೋಡ್ಲು ನಿವಾಸಿಯಾಗಿದ್ದ ದಕ್ಷತ್ (38) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ನಗರದ ಪೋಟ್9 ವ್ಯೂ ಲಾಡ್ಜಿನ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೂ ಮುನ್ನ ತನ್ನ ವಾಟ್ಸಾಪ್ ಸ್ಟೇಟಸ್‍ನಲ್ಲಿ ‘ಮಿಸ್ ಯು ಅಮ್ಮ-ಅಪ್ಪ’ ಎಂದು ಆಪ್ ಡೇಟ್ ಮಾಡಿ ಸಾವನ್ನಪ್ಪಿದ್ದಾರೆ.

ಕಾರು ಚಾಲನೆ ಮಾಡಿಕೊಂಡು ಲಾಡ್ಜ್ ಶುಕ್ರವಾರ ಕೊಠಡಿ ಬುಕ್ ಮಾಡಿದ್ದ ದಕ್ಷತ್, ಇಂದು ಬೆಳಗ್ಗೆಯಿಂದಲೂ ಕೊಠಡಿಯಿಂದ ಹೊಸ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಲಾಡಜ್ಸ್ ಸಿಬ್ಬಂದಿಗಳು ಕೊಠಡಿ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ದಕ್ಷತ್ ನೇಣಿಗೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಡಿಕೇರಿ ನಗರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Comments are closed.