ಮೈಸೂರು: ದೀಪಿಕಾ ಪಡುಕೋಣೆ ಒಳ್ಳೆಯ ವಿಚಾರಗಳಿಗೆ ಬೆಂಬಲ ಸೂಚಿಸದರೆ, ಒಳ್ಳೆಯ ಸಿನಿಮಾಗಳನ್ನು ಜನರೇ ಮೆಚ್ಚಿ ನೋಡುತ್ತಾರೆ. ನಟ ನಟಿಯರ ವರ್ತನೆಯನ್ನು ಎಲ್ಲವನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ.ಒಳ್ಳೆಯ ವಿಚಾರಗಳಿಗೆ ಬೆಂಬಲ ಕೊಡಲಿ ಎಂದು ಬಾಲಿವುಡ್ ನಟಿ ದೀಪಿಕಾಗೆ ಸಂಸದ ಪ್ರತಾಪ್ ಸಿಂಹ ಕಿವಿಮಾತು ಹೇಳಿದ್ದಾರೆ
ತಮ್ಮ ಬಹುನೀರಿಕ್ಷೆಯ ಸಿನಿಮಾ ‘ಚಪಾಕ್’ ಪ್ರಚಾರದ ಜೊತೆಗೆ ಜೆಎನ್ಯು ಹಿಂಸಾಚಾರಕ್ಕೆ ಒಳಗಾದ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿನ್ನೆ ಜೆಎನ್ಯು ಕ್ಯಾಂಪಸ್ಗೆ ತೆರಳಿದ್ದರು. ಈ ಕುರಿತು ಹಲವು ಭಿನ್ನಾಭಿಪ್ರಾಯಗಳು ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರು ಮೈಸೂರು-ಕೊಡಗು ಸಂಸದ, ದೀಪಿಕಾ ಅವರಿಗೆ ಹೋರಾಟದಲ್ಲಿ ಭಾಗಿಯಾಗ ಬೇಡಿ ಎಂದು ಹೇಳುವುದಿಲ್ಲ. ಒಳ್ಳೆಯ ವಿಚಾರಗಳಿಗೆ ಅವರು ಬೆಂಬಲ ನೀಡಲಿ. ಆಗ ಜನರೇ ಅವರ ಸಿನಿಮಾಗಳನ್ನು ಮೆಚ್ಚಿ ನೋಡುತ್ತಾರೆ. ಅವರ ಹೊಸ ಚಿತ್ರ ಬಿಡುಗಡೆಯಾಗುತ್ತಿದ್ದು, ಅವರಿಗೆ ಶುಭಕೋರುತ್ತೇನೆ. ಕೇವಲ ಜೆಎನ್ಯು, ಜಾಮಿಯಾ ವಿವಿಗಳು ಮಾತ್ರವಲ್ಲ. ದೇಶಾದ್ಯಂತ 600ಕ್ಕೂ ಹೆಚ್ಚು ವಿವಿಗಳಿವೆ ಎಂದು ಮರೆಯಬಾರದು ಎಂದು ವ್ಯಂಗ್ಯವಾಡಿದ್ದಾರೆ.
ಘಟನೆ ಸಂಬಂಧ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಘಟನೆಯಲ್ಲಿ ಎಬಿವಿಪಿ ಕಾರ್ಯಕರ್ತರಿಗೂ ಪೆಟ್ಟು ಬಿದ್ದಿದೆ. ಇದೀಗ ಸಿನಿಮಾ ನಟ ನಟಿಯರನ್ನು ಕರೆತಂದಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಬೇರೆ ರೂಪ ಕೊಡುವ ಯತ್ನ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.
ಜವಹರಲಾಲ್ ನೆಹರು ಸ್ಥಾಪಿಸಿದ ಜೆಎನ್ಯು ವಿವಿಗೆ ಸ್ವತಃ ಇಂದಿರಾಗಾಂಧಿಯವರು ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಇಂದಿರಾ ಗಾಂಧಿಯವರಿಗೂ ಭಾಷಣ ಮಾಡದಂತೆ ಅಡ್ಡಿ ಪಡಿಸಲಾಗಿತ್ತು. ಪರಿಣಾಮ 45 ದಿನಗಳ ಕಾಲ ಜೆ.ಎನ್.ಯುವನ್ನು ಇಂದಿರಾ ಗಾಂಧಿಯವರು ಬಂದ್ ಮಾಡಿಸಿದ್ದರು. ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
Comments are closed.