ಕರ್ನಾಟಕ

ಯಾರಿಗೇ ಅಧ್ಯಕ್ಷ ಸ್ಥಾನ ನೀಡಿದರೂ ಒಗ್ಗಟ್ಟಾಗಿ ಕೆಲಸ‌ ಮಾಡುತ್ತೇವೆ: ಕೆ.ಎಚ್‌.ಮುನಿಯಪ್ಪ

Pinterest LinkedIn Tumblr


ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಪಟ್ಟ ಯಾರಿಗೆ ಬೇಕಾದರೂ ನೀಡಲಿ. ನಾವೆಲ್ಲಾ ನಾವು ಒಗ್ಗಟ್ಟಾಗಿ ಕೆಲಸ‌ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗಾದರೂ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಲಿ. ನಮ್ಮ ಅಭಿಪ್ರಾಯವನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ತಿಳಿಸಿದ್ದೇವೆ. ಈ ವಾರದೊಳಗೆ ಅವರು ತೀರ್ಮಾನ‌ ಕೈಗೊಳ್ಳಲಿದ್ದಾರೆ‌ ಎಂದರು.

ಪ್ರತಿ ಪಕ್ಷದಲ್ಲಿ ಸಹಜವಾಗಿ ಭಿನ್ನಾಭಿಪ್ರಾಯ ಇರುತ್ತದೆ. ಆದರೆ ನಾವೆಲ್ಲ ಜೊತೆಯಲ್ಲಿ ಕೆಲಸ‌ ಮಾಡುತ್ತೇವೆ. ಹೈಕಮಾಂಡ್ ಯಾರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೂ ನಾವು ಜೊತೆಯಲ್ಲಿ ಕೆಲಸ ಮಾಡುತ್ತೇವೆ ಎಂದರು.

ರಾಜ್ಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ಇರುವ ಗೊಂದಲವನ್ನು ಶಮನ ಮಾಡುವ ಸಲುವಾಗಿ ಕೈ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡಿದೆ.

Comments are closed.