ಮಡಿಕೇರಿ: ತೆಲುಗು ಸಿನಿಮಾದಲ್ಲಿ ಹವಾ ಎಬ್ಬಿಸಿರುವ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣಗೆ ಶಾಕ್ ಕೊಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಇಂದು ಕೂಡ ಸಾನ್ವಿ ಮತ್ತು ಆಕೆಯ ಕುಟುಂಬದ ಆಸ್ತಿಪಾಸ್ತಿಯ ತಲಾಶ್ ಮುಂದುವರಿಸಲಿದ್ದಾರೆ.
ಗರುವಾರ ಕೊಡಗು ಜಿಲ್ಲೆಯ ವಿರಾಜಪೇಟೆಯ ಕುಕ್ಲೂರಿನ ನಿವಾಸದಲ್ಲಿ ಬೆಳಗ್ಗೆ 7 ಗಂಟೆಗೆ ಐಟಿ ಟೀಂ ದಾಳಿ ಮಾಡಿತ್ತು. ಅಭಿಮಾನಿಗಳ ಅವತಾರದಲ್ಲಿ ಬೇಟೆಗಿಳಿದಿದ್ದ ಐಟಿ ಟೀಂ, ರಾತ್ರಿ 9.30ಕ್ಕೆ ರಶ್ಮಿಕಾ ವಿಚಾರಣೆ ಆರಂಭಿಸಿ ಅಲ್ಲೇ ಉಳಿದುಕೊಂಡಿದೆ. ರೇಡ್ ವೇಳೆ ಚೆನ್ನೈನಲ್ಲಿದ್ದ ರಶ್ಮಿಕಾಗೆ ತಕ್ಷಣವೇ ಬಂದು ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದರು. ಇದನ್ನೂ ಓದಿ: ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್
ವಿರಾಜಪೇಟೆಯಲ್ಲಿ ಕುಕ್ಲೂರಲ್ಲಿ ಐಷಾರಾಮಿ ಬಂಗಲೆ ಇದ್ದು, ಮೈತಾಡಿ ಅನ್ನೋ ಗ್ರಾಮದಲ್ಲಿ ಮೂರು ಎಕರೆ ಕಾಫಿ ತೋಟವಿದೆ. ಇತ್ತೀಚೆಗಷ್ಟೇ ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗ ಖರೀದಿಸಿದ್ದ ರಶ್ಮಿಕಾ ತಂದೆ ಮದನ್ ಮಂಜಣ್ಣ, ಪೆಟ್ರೋಲ್ ಬಂಕ್, ಶಾಲೆ ನಿರ್ಮಾಣಕ್ಕೆ ಯೋಚಿಸಿದ್ದರು. ವಿರಾಜಪೇಟೆಯಲ್ಲಿ ಸೆರಿನಿಟ್ ಹಾಲ್ ಹೆಸರಿನ ಐಷಾರಾಮಿ ಕಲ್ಯಾಣ ಮಂಟಪವಿದ್ದು ಇಲ್ಲಿನ ಒಂದು ದಿನದ ಬಾಡಿಗೆಯೇ ಒಂದೂವರೆ ಲಕ್ಷ ರೂಪಾಯಿ. ವರ್ಷದ ಹಿಂದೆಯಷ್ಟೇ ವಿರಾಜಪೇಟೆಯ ವಿಜಯನಗರದಲ್ಲಿರುವ ಮನೆಯನ್ನು ರಶ್ಮಿಕಾ ತಂದೆ ಒಂದೂವರೆ ಕೋಟಿ ರೂಪಾಯಿಗೆ ಮಾರಿದ್ದರು.
Comments are closed.