ಬೆಂಗಳೂರು: ಮನೆ ಗುಡಿಸುವ ಕೆಲಸದ ಜೊತೆಗೆ ಮನೆಯಲ್ಲಿದ್ದ ಚಿನ್ನಾಭರಣವನ್ನ ದೋಚಿಕೊಂಡು ಹೋಗುತ್ತಿದ್ದ ಐನಾತಿ ಕಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಆಂಧ್ರ ಮೂಲದ ಲಕ್ಷ್ಮಿ ಬಂಧಿತ ಐನಾತಿ ಕಳ್ಳಿ. ಬಂಧಿತ ಕಳ್ಳಿಯಿಂದ 12 ಲಕ್ಷ ಮೌಲ್ಯದ 310 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಯಲಹಂಕದಲ್ಲಿ ವಾಸವಾಗಿದ್ದ ಲಕ್ಷ್ಮೀ ಸಂಪಗಿಹಳ್ಳಿಯಲ್ಲಿರುವ ಬ್ರಿಗೇಡ್ ಅಪಾರ್ಟ್‍ಮೆಂಟ್‍ನಲ್ಲಿ ಮನೆ ಕೆಲಸ ಮಾಡಿಕೊಂಡಿದ್ದಳು.
ಬ್ರಿಗೇಡ್ ಅಪಾರ್ಟ್‍ಮೆಂಟ್ ನಲ್ಲಿರುವ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದ ಲಕ್ಷ್ಮೀ, ರಘುವೀರ್, ಗೋಪಾಲ್, ಅವಿನಾಶ್ ಸೇರಿದಂತೆ ಒಟ್ಟು ಅಪಾರ್ಟ್‍ಮೆಂಟ್ ನಾಲ್ಕು ಮನೆಗಳಲ್ಲಿ ಕೈಚಳಕ ತೋರಿದ್ದಾಳೆ. ಬ್ಯಾಕ್ ಟೂ ಬ್ಯಾಕ್ ಲಕ್ಷ್ಮಿ ಕೆಲಸ ಮಾಡುತ್ತಿದ್ದ ನಾಲ್ಕು ಮನೆಗಳಲ್ಲಿ ಕಳ್ಳತನವಾಗಿದೆ. ಲಕ್ಷ್ಮಿಯ ಮೇಲೆ ಅನುಮಾನ ಬಂದು ಕಳ್ಳತನ ವಿಚಾರವಾಗಿ ಮಾಲೀಕರು ವಿಚಾರಿಸಿದ್ದಾರೆ.
ಲಕ್ಷ್ಮಿ ನಾನು ಕಳ್ಳತನ ಮಾಡೇ ಇಲ್ಲ ಎಂದು ವಾದಿಸಿದ್ದಾಳೆ. ಆಗ ಮಾಲೀಕ ರಘುವೀರ್ ಕಳ್ಳತನವಾಗಿರುವ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಲೀಕರಿಗೆ ಮನೆ ಕೆಲಸದವಳ ಮೇಲೆ ಅನುಮಾನ ಇದ್ದ ಕಾರಣ ಲಕ್ಷ್ಮಿಯ ಹೆಸರು ನಮೂದಿಸಿ ಪೊಲೀಸರಿಗೆ ದೂರು ನೀಡಿದ್ದರು. ಲಕ್ಷ್ಮಿಯನ್ನು ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ಮಾಡಿದಾಗ ಮನೆಯಲ್ಲಿ ಕಷ್ಟ ಇದ್ದ ಕಾರಣ ನಾಲ್ಕು ಮನೆಯಲ್ಲಿ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
Comments are closed.