ಬೆಂಗಳೂರು: ಕೊರೊನಾ ಹೆಸರು ಕೇಳಿದರೆ ಇಡೀ ವಿಶ್ವವೇ ಬೆಚ್ಚಿಬೀಳುತ್ತಿದೆ. ಅದರಲ್ಲೂ ಕೊರೊನಾ ವೈರಸ್‍ನಿಂದ ಚೀನಾ ತತ್ತರಿಸಿ ಹೋಗಿದ್ದು, ಚೀನಾದಲ್ಲಿ ಈವರೆಗೆ 638 ಮಂದಿ ಬಲಿಯಾಗಿದ್ದಾರೆ. ಜೊತೆಗೆ ಚೀನಾವೊಂದರಲ್ಲೇ 31 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ವೈರಸ್‍ನಿಂದ ಮುಕ್ತಿ ಪಡೆಯಲು ಔಷಧಿ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ.
ಆಸ್ಟ್ರೇಲಿಯಾದ ಪ್ರಮುಖ ವೈಜ್ಞಾನಿಕ ಸಂಸ್ಥೆಯಾದ ಸಿಎಸ್‌ಐಆರ್‌ಓ(ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ)ಯಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ನೇತೃತ್ವವನ್ನು ಭಾರತೀಯ ವಿಜ್ಞಾನಿ ಎಸ್.ಎಸ್ ವಾಸನ್ ವಹಿಸಿದ್ದಾರೆ. ವಾಸನ್ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸ್ಕಾಲರ್ ಹಾಗೂ ಬೆಂಗಳೂರಿನ ಐಐಎಸ್‍ಸಿ(ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್) ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಇವರ ನೇತೃತ್ವದ ತಂಡ ಆಸ್ಟ್ರೇಲಿಯಾದ ಸಿಎಸ್‌ಐಆರ್‌ಓನಲ್ಲಿ ಚಿಕಿತ್ಸಾತ್ಮಕವಾಗಿ ಮೊದಲ ಹಂತದಲ್ಲಿ ಕೊರೊನಾ ವೈರಸ್‍ಗಳನ್ನು ಬೆಳೆಸಿದೆ. ಮಾನವ ದೇಹದಿಂದ ಪಡೆದ ಸ್ಯಾಂಪಲ್ ಕೊರೊನಾ ವೈರಸ್‍ಗಳನ್ನು ವಿನಾಶಗೊಳಿಸಲು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಎಸ್.ಎಸ್ ವಾಸನ್ ತಂಡದ ನೇತೃತ್ವದಲ್ಲೇ ಡೆಂಗ್ಯೂ, ಚಿಕನ್ ಗುನ್ಯಾ ಸೇರಿ ಹಲವು ರೋಗಗಳಿಗೆ ಔಷಧಿ ಕಂಡುಹಿಡಿಯಲಾಗಿತ್ತು.
Comments are closed.