ಕರ್ನಾಟಕ

ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೂ ದಾಳಿಯಾಗಲಿ: ಸದಾನಂದ ಗೌಡ

Pinterest LinkedIn Tumblr


ಚಿಕ್ಕಬಳ್ಳಾಪುರ: ಕೇಂದ್ರದಿಂದ ಜಾರಿ ನಿರ್ದೇಶನಾಲಯ(ಇಡಿ) ದಾಳಿ ಮಾಡಿಸಿದರೆ ರಾಜಕಾರಣ ಅಂತಾರೆ. ಹೀಗಾಗಿ ನರೇಂದ್ರ ಮೋದಿಯಿಂದ ಹಿಡಿದು ಎಲ್ಲಾ ರಾಜಕಾರಣಿಗಳ ಮನೆ ಮೇಲೂ ದಾಳಿ ಆಗಬೇಕು ಎಂದು ಕೇಂದ್ರ ಸಚಿವ ಸದಾನಂದ ಗೌಡ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರೊಂದಿಗೆ ಮಾತುಕತೆಯ ವೇಳೆ ಈ ಹೇಳಿಕೆ ನೀಡಿದ್ದಾರೆ. ಬಾಡೂಟ ಹಾಕಿಸಿದರೆ ಸಾಕು ಜನ ವೋಟು ಹಾಕುತ್ತಾರೆ. ದುಡ್ಡಿರದ ಪ್ರಾಮಾಣಿಕ ರಾಜಕಾರಣಿಗೆ ಅವಕಾಶ ಉಂಟಾ ಎಂದು ಪ್ರಶ್ನಿಸಿದರು. ಅಲ್ಲದೆ ಕೋಟಿಗಟ್ಟಲೇ ಖರ್ಚು ಮಾಡಿ ಬಂಡವಾಳ ಸಮೇತ ತೆಗೀತಾನೆ. ದೇಶದ ಎಲ್ಲಾ ಕಡೆ ಈ ತರ ಇಲ್ಲ. ಆದರೆ ಕರ್ನಾಟಕ ನಂಬರ್ ಒನ್ ಆಗಿದ್ದು, ಜನ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಕೇಂದ್ರದಿಂದ ಇಡಿ ದಾಳಿ ಮಾಡಿಸಿದರೆ ರಾಜಕಾರಣ ಅಂತಾರೆ. ಹೀಗಾಗಿ ನರೇಂದ್ರ ಮೋದಿಯಿಂದ ಹಿಡಿದು ಎಲ್ಲಾ ರಾಜಕಾರಣಿಗಳ ಮನೆ ರೇಡ್ ಆಗಬೇಕು. ರಾಜಕಾರಣ ವ್ಯಾಪಾರವಾಗಿದೆ. ನಮ್ಮ ಪಕ್ಷವೂ ಸೇರಿದೆ. ರಾಜಕಾರಣದಲ್ಲಿ ಶೇ.25 ಒಳ್ಳೆಯವರಿದ್ದಾರೆ. ಆದರೆ ಅವರು ಶೇ.75ರಲ್ಲಿ ಸೇರಿ ಕಲುಷಿತ ಆಗಿದ್ದಾರೆ ಎಂದು ತಿಳಿಸಿದರು.

Comments are closed.