ಕರ್ನಾಟಕ

‘ಮಮ್ಮಿ ಸ್ವಾರಿ’ ಎಂದು ಡೆತ್‍ನೋಟ್ ಬರೆದಿಟ್ಟು ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದ ಲಗ್ಗೆರೆಯಲ್ಲಿ ನಡೆದಿದೆ.

ಗೃಹಣಿ ಭಾರತಿ ನೇಣಿಗೆ ಶರಣಾದ ಮಹಿಳೆ. ಕಳೆದ ಮೂರು ತಿಂಗಳ ಹಿಂದೆ ಭಾರತಿಗೆ ಸತೀಶ್ ಜೊತೆ ಮದುವೆ ಆಗಿತ್ತು. ಇಂದು ಮಧ್ಯಾಹ್ನ (ಸೋಮವಾರ) ಮೂರು ಗಂಟೆ ಸಮಯದಲ್ಲಿ ಮನೆಯಲ್ಲಿದ್ದ ಭಾರತಿ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಡೆತ್ ನೋಟ್‍ನಲ್ಲಿ ಮಮ್ಮಿ ಕ್ಷಮಿಸಿ, ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಸಾಕಷ್ಟು ಬಾರಿ ಚಿಕಿತ್ಸೆ ಪಡೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರು ಕಾರಣರಲ್ಲ. ಸತೀಶ್ ನನಗೆ ನಿಮ್ಮ ಜೊತೆ ಬಾಳುವ ಯೋಗ ಮತ್ತು ಯೋಗ್ಯತೆ ಇಲ್ಲ. ದಯವಿಟ್ಟು ಕ್ಷಮಿಸು ಎಂದು ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ ಭಾರತಿ ಪೋಷಕರು ಇದು ಆತ್ಮಹತ್ಯೆ ಅಲ್ಲ ಬದಲಾಗಿ ಗಂಡ ಸತೀಶನೇ ಕೊಲೆ ಮಾಡಿ ತಾನೇ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲ ನಗರ ಪೊಲೀಸರು, ಪತಿ ಸತೀಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments are closed.