ಕರ್ನಾಟಕ

ಕರೋನಾ ವೈರಸ್ ಭೀತಿ ಹಿನ್ನೆಲೆ: ನಾಟಿ ಔಷಧಿ ಕೊಡುವುದನ್ನು ನಿಲ್ಲಿಸಿದ ನರಸೀಪುರದ ನಾರಾಯಣ ಮೂರ್ತಿ

Pinterest LinkedIn Tumblr


ಶಿವಮೊಗ್ಗ: ನಾಟಿ ವೈದ್ಯ ಪದ್ಧತಿ ಮೂಲಕ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ನರಸೀಪುರದ ನಾರಾಯಣ ಮೂರ್ತಿ ಅವರು ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಔಷಧ ಕೊಡುವುದನ್ನು ನಿಲ್ಲಿಸಿದ್ದಾರೆ.

ದೇಶದ ವಿವಿಧೆಡೆಯಿಂದ ಔಷಧಕ್ಕಾಗಿ ವಾರದಲ್ಲಿ ಮೂರು ದಿನ ನರಸೀಪುರಕ್ಕೆ ಹತ್ತುಸಾವಿರಕ್ಕೂ ಹೆಚ್ಚುಜನ ಬಂದು ಒಂದೆಡೆ ಸೇರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯಿಂದ ತಾತ್ಕಾಲಿಕವಾಗಿ ಔಷಧ ಕೊಡುವುದನ್ನು ನಿಲ್ಲಿಸುವಂತೆ ನಾರಾಯಣಮೂರ್ತಿ ಅವರಿಗೆ ಸೂಚನೆ ಬಂದಿತ್ತು. ಈ ಹಿನ್ನಲೆ ನಾರಾಯಣ ಮೂರ್ತಿ ಔಷಧ ಕೊಡುವುದನ್ನು ನಿಲ್ಲಿಸಿದ್ದಾರೆ.

ಆದರೆ ನಾರಾಯಣ ಮೂರ್ತಿ ಅವರು ಔಷಧಕೊಡುವುದನ್ನು ನಿಲ್ಲಿಸಿದರೂ ಕೆಲ ಖಾಸಗಿ ವ್ಯಕ್ತಿಗಳು ನಾರಾಯಣಮೂರ್ತಿ ಹೆಸರಿನಲ್ಲಿ ನಕಲಿ ಔಷಧ ವಿತರಣೆ ಮಾಡುತ್ತಿದ್ದರಿಂದ ಸ್ಥಳೀಯರು ನಕಲಿ ಔಷಧ ಮಾರುತ್ತಿದ್ದವರ ಮೇಲೆ ದಾಳಿ ನಡೆಸಿದ್ದಾರೆ.

ಹೆದ್ದಾರಿ ತಡೆದು ಪ್ರತಿಭಟನೆ

ಹೊರರಾಜ್ಯದಿಂದ ಔಷಧಕ್ಕಾಗಿ ನರಸೀಪುರಕ್ಕೆ ಬಂದಿದ್ದ ವಾಹನಗಳಿಗೆ ದಿಗ್ಭಂಧನ ವಿಧಿಸಲಾಗಿದೆ. ಹೆದ್ದಾರಿ ತಡೆದಿದ್ದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್‌ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.

ಮತ್ತೊಂದೆಡೆ ನರಸೀಪುರದಲ್ಲಿ ಹೆಚ್ಚು ಜನ ಸೇರುತ್ತಿರುವುದರಿಂದ ಸ್ವಚ್ಚತೆ ಇಲ್ಲದಂತಾಗಿದ್ದು, ಜನ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ನಾರಾಯಣಮೂರ್ತಿ ಅವರು ಔಷಧ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಾರಾಯಣ ಮೂರ್ತಿ ನಕಲಿ ಔಷಧ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

Comments are closed.