ಚಿತ್ರದುರ್ಗ: ಮಹಾಮಾರಿ ಕೋವಿಡ್-19 ಕೋಟೆನಾಡು ಚಿತ್ರದುರ್ಗ ಜಿಲ್ಲೆಗೂ ವ್ಯಾಪಿಸಿದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನತೆ ಎಚ್ಚೆತ್ತು ಹಳ್ಳಿಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಚಿತ್ರದುರ್ಗ ತಾಲೂಕು ಆಯಿತೋಳು ಗ್ರಾಮ ಸಂಪರ್ಕಿಸುವ ಎಲ್ಲಾ ಮುಖ್ಯ ರಸ್ತೆಗಳಿಗೂ ಗ್ರಾಮಸ್ಥರು ಬೇಲಿ ಹಾಕುವ ಮೂಲಕ ಗ್ರಾಮದೊಳಕ್ಕೆ ಯಾರೂ ಬಾರದಂತೆ ತಡೆಯಲು ಮುಂದಾಗಿದ್ದಾರೆ.
ಇಲ್ಲಿಂದ ಜಗಳೂರು, ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿದ್ದು, ಯಾವುದೇ ವಾಹನ ಇಲ್ಲಿ ಸಂಚರಿಸದಂತೆ ಎಚ್ಚರಿಕೆ ವಹಿಸಿದ್ದಾರೆ.
ಸರ್ಕಾರ ಕಠಿಣ ಎಚ್ಚರಿಕೆ ನೀಡಿದರೂ ಜನತೆ ಎಚ್ಚೆತ್ತುಕೊಳ್ಳದಿರುವುದು ಒಂದೆಡೆಯಾದರೆ, ಹಳ್ಳಿಯ ಜನ ಎಚ್ಚೆತ್ತು ಸ್ವಯಂ ಪ್ರೇರಣೆಯಿಂದ ಹಳ್ಳಿಯೊಳಗೆ ಕೋವಿಡ್-19 ಬಾರದಂತೆ ತಡೆಯಲು ಮುಂದಾಗಿರುವುದು ಶ್ಲಾಘನೀಯ.
Comments are closed.