ಕರ್ನಾಟಕ ಸ್ಕೂಲ್ಸ್ ಎಜುಕೇಷನ್ ಡಿಪಾರ್ಟ್‌ಮೆಂಟ್ 7 ರಿಂದ 10ನೇ ತರಗತಿವರೆಗಿನ ಎಲ್ಲಾ ಪರೀಕ್ಷೆಗಳು ಮತ್ತು ಕೆಲವು ಪ್ರವೇಶಾತಿಗಳನ್ನು ಮುಂದೂಡಿದೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.
ನೋವೆಲ್ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾದ ಕಾರಣ, ಮುಂಜಾಗೃತ ಕ್ರಮವಾಗಿ ಎಲ್ಲಾ ಪರೀಕ್ಷೆಗಳನ್ನು ಏಪ್ರಿಲ್ 20, 2020 ರವರೆಗೆ ಮುಂದೂಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಲಾಗಿದೆ.
ಇಲಾಖೆಯು ಈ ಹಿಂದೆ ಮಾರ್ಚ್ 14 ರಿಂದ ನಡೆಯಬೇಕಿದ್ದ 7 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮಾರ್ಚ್ 31, 2020 ವರೆಗೆ ಮಾತ್ರ ಮುಂದೂಡಲಾಗಿತ್ತು. ಹಾಗೂ ರಜೆಯನ್ನು ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿತ್ತು.
ಆದರೆ, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವುದು ಮುಂದುವರೆಯುತ್ತಿರುವುದರಿಂದ ಹಾಗೂ ದಿನಾಂಕ 15-04-2020 ರವರೆಗೆ ಇಡೀ ರಾಷ್ಟ್ರವನ್ನು ಲಾಕ್‌ಡೌನ್ ಮಾಡುವಂತೆ ಮಾನ್ಯ ಪ್ರಧಾನ ಮಂತ್ರಿಗಳು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಪರೀಕ್ಷೆ, ಪ್ರಕ್ರಿಯೆಗಳನ್ನು ಏಪ್ರಿಲ್ 20, 2020 ರವರೆಗೆ ಮುಂದೂಡಲಾಗಿದೆ.
ಮುಂದೂಡಲಾದ ಪರೀಕ್ಷೆಗಳ ಪಟ್ಟಿ
– 7 ರಿಂದ 9 ನೇ ತರಗತಿಯ ಪರೀಕ್ಷೆಗಳು
– ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು
– ಆರ್‌ಟಿಇ ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಗಳು
– ಶಾಲೆಗಳಲ್ಲಿ 2020-21ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆಗಳು
ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ದಿನಾಂಕ 20-04-2020 ರ ನಂತರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಹಾಗೂ ಈ ವಿಷಯನ್ನು ಶಾಲಾ ಮುಖ್ಯ ಶಿಕ್ಷಕರು/ ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಲು ಸೂಚಿಸಲಾಗಿದೆ.
Comments are closed.