ಬೆಂಗಳೂರು: ಫ್ರಾನ್ಸ್ ದೇಶದಿಂದ ಭಾರತಕ್ಕೆ ಪ್ರವಾಸಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ದೃಢವಾಗಿದೆ. ಇವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
65 ವರ್ಷ ಪ್ರಾಯದ ಫ್ರಾನ್ಸ್ ಪ್ರಜೆ ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದ. ಅಲ್ಲಿಂದ ಆತ ಆಂಧ್ರ ಪ್ರದೇಶದ ಪುಟ್ಟಪರ್ತಿಗೆ ತೆರಳಿದ್ದ. ಪುಟ್ಟಪರ್ತಿಯಲ್ಲಿ ಆತನಿಗೆ ರೂಮ್ ನೀಡಲು ನಿರಾಕರಿಸಿದ ಕಾರಣ ಫ್ರಾನ್ಸ್ ಪ್ರಜೆ ಮಾರ್ಚ್ 21ರಂದು ಬೆಂಗಳೂರಿಗೆ ಆಗಮಿಸಿದ್ದ.
ಆತನಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆ ಆತನನ್ನು ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ರಕ್ತ ಮತ್ತು ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ಇಂದು ಆಗಮಿಸಿದ್ದುಕೋವಿಡ್-19 ಸೋಂಕು ಇರುವುದು ದೃಢವಾಗಿದೆ.
Comments are closed.