ಬೆಂಗಳೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಲಾಸಿಪಾಳ್ಯದ ಹೋಲ್‍ಸೇಲ್ ತರಕಾರಿ ಮಾರ್ಕೆಟ್ ನ್ನು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಈ ಕುರಿತು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮತ್ತು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿದ್ದು, ತಾತ್ಕಾಲಿಕವಾಗಿ 15 ದಿನಗಳ ಕಾಲ ಕೆ.ಆರ್.ಮಾರ್ಕೆಟ್ ನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಯನ್ನು ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಸ್ಟಾಲ್‍ಗಳು ಸಿದ್ಧವಾಗಿದ್ದು, 20 ಅಡಿ ಅಂತರದಲ್ಲಿ 10 ಸ್ಟಾಲ್‍ಗಳನ್ನು ಹಾಕಲಾಗಿದೆ. ಸಾರ್ವಜನಿಕರು ಅಂತರ ಕಾಯ್ದುಕೊಳ್ಳಲು 5 ಅಡಿ ಅಂತರದಲ್ಲಿ ಸರ್ಕಲ್ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಹೀಗಾಗಿ ಶನಿವಾರದಿಂದ ತರಕಾರಿ ಮಾರ್ಕೆಟ್ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಇರಲಿದೆ. ಸಾರ್ವಜನಿಕರು ಅಂತರ ಕಾಯ್ದು ಕೊಳ್ಳು 6 ಅಡಿ ಅಂತರದಲ್ಲಿ ಸರ್ಕಲ್ ಹಾಕಲಾಗಿದೆ. ಬೆಳಗ್ಗೆ ಕೆ.ಆರ್.ಮಾರ್ಕೆಟ್ ಗೆ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಉದಯ್ ಗರುಡಾಚಾರ್, ಮಾರುಕಟ್ಟೆಯಲ್ಲಿನ ಜನ ಸಂದಣಿ ಕಂಡು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆಸಿದ್ದಾರೆ.
ಸದ್ಯಕ್ಕೆ 10 ಸ್ಟಾಲ್ ಗಳ ನಿರ್ಮಾಣ ಮಾಡಲಾಗಿದ್ದು, ನಾಳೆಯಿಂದ ಪೂರ್ತಿ ಮೈದಾನದಲ್ಲಿ ಸ್ಟಾಲ್ ನಿರ್ಮಾಣ ಮಾಡಲಾಗುವುದು. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ತರಕಾರಿ ಟೆಂಪೋಗಳು ನ್ಯಾಷನಲ್ ಕಾಲೇಜು ಮೈದಾನಕ್ಕೆ ಬರುತ್ತಿವೆ. ಶನಿವಾರ ಬೆಳಗ್ಗೆಯಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾರಾಟ ಆರಂಭವಾಗಲಿದೆ.
ಕಲಾಸಿಪಾಳ್ಯ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯನ್ನು ಮಾತ್ರ ಸ್ಥಳಾಂತರಿಸಲಾಗುತ್ತಿದ್ದು, ಕೆ.ಆರ್.ಮಾರ್ಕೆಟ್ ನಲ್ಲಿ ಹೂವಿನ ಮಂಡಿ, ಚಿಲ್ಲರೆ ತರಕಾರಿ ವ್ಯಾಪಾರ ನಡೆಯಲಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕೆ.ಆರ್.ಮಾರ್ಕೆಟ್ ನಲ್ಲಿನ ಅಂಗಡಿಗಳನ್ನು ಸ್ಥಾಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದ್ದು, ಸದ್ಯಕ್ಕೆ ಕಲ್ಯಾಸಿಪಾಳ್ಯದ ಅತಿ ದೊಡ್ಡ ಹೋಲ್ ಸೆಲ್ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ.
Comments are closed.