ಬೆಂಗಳೂರು: ಜಗತ್ತಿನಾದ್ಯಂತ ಭಯ ಭೀತಿ ಹುಟ್ಟಿಸಿರುವ ಮಾರಣಾಂತಿಕ ಕೋವಿಡ್ 19 ವೈರಸ್ ಸೋಂಕು ಗುಣಪಡಿಸುವ ನಿಟ್ಟಿನಲ್ಲಿ ಲಸಿಕೆ ಕಂಡುಹಿಡಿಯಲು ಅಮೆರಿಕ, ಇಸ್ರೇಲ್, ಚೀನಾ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಕರ್ನಾಟಕದ (ಬೆಂಗಳೂರು) ಎಚ್ ಸಿಜಿ ಆಸ್ಪತ್ರೆಯ Oncologist(ಒಂಕಾಲೊಜಿಸ್ಟ್) ವೈದ್ಯ ಡಾ.ವಿಶಾಲ್ ರಾವ್, ಕೋವಿಡ್ 19 ವೈರಸ್ ಗುಣಪಡಿಸುವ ಕಾರ್ಯದ ಸಮೀಪದಲ್ಲಿ ಇದ್ದಿರುವುದಾಗಿ ತಿಳಿಸಿದ್ದಾರೆ.
ಡಾ.ವಿಶಾಲ್ ರಾವ್ ಕೋವಿಡ್ 19ಬಗ್ಗೆ ಹೇಳಿದ್ದಿಷ್ಟು:
ಮನುಷ್ಯನ ದೇಹದೊಳಗೆ ವೈರಸ್ ಅನ್ನು ಕೊಲ್ಲುವ ಇಂಟರ್ ಫೆರೋನ್(ಪ್ರೊಟೀನ್) ಪದಾರ್ಥದ ಕಣಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಆದರೆ ಕೋವಿಡ್ 19 ಪ್ರಕರಣದಲ್ಲಿ ಸೆಲ್ಸ್ ಬಿಡುಗಡೆ ಆಗುವುದಿಲ್ಲ. ಯಾಕೆಂದರೆ ಕೋವಿಡ್ ಪೀಡಿತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿರುತ್ತದೆ.
ಏನೇ ಆಗಲಿ ಕೋವಿಡ್ 19 ರೋಗಿಗಳಿಗೆ ಈ ಥೆರಪಿ ತುಂಬಾ ಉಪಯುಕ್ತವಾಗಲಿದೆ ಎಂದು ಡಾ.ವಿಶಾಲ್ ರಾವ್ ತಿಳಿಸಿದ್ದಾರೆ. ಕೋವಿಡ್ 19 ರೋಗಿಗಳನ್ನು ಗುಣಪಡಿಸಲು ಇಂಟರ್ ಫೆರೋನ್ ತುಂಬಾ ಪರಿಣಾಮಕಾರಿ ಎಂಬ ಅಂಶದ ಬಗ್ಗೆ ನಮಗೆ ಕೆಲವೊಂದು ಅಂಶಗಳು ಲಭ್ಯವಾಗಿದೆ ಎಂದು ವಿವರಿಸಿದ್ದಾರೆ.
ಸಾಮಾನ್ಯ ಪರೀಕ್ಷೆಯ ವೇಳೆ ರಕ್ತದ ಮಾದರಿ ಪರೀಕ್ಷೆ ನಡೆಸುತ್ತೇವೆ. ಈ ವೇಳೆ ನಮಗೆ ಲಭ್ಯವಾಗುವ ಮಾಹಿತಿ ಮೇರೆಗೆ ಸೆಲ್ಸ್ ಹಾಗೂ ಇಂಟರ್ ಫೆರೋನ್ ಅಂಶವನ್ನು ಹೊರತೆಗೆಯುತ್ತೇವೆ. ಈ ಎರಡು ಅಂಶಗಳ ಮಿಶ್ರಣದಿಂದ ಕೋವಿಡ್ 19 ರೋಗಿಗಳ ಚಿಕಿತ್ಸೆ ಪರಿಣಾಮಕಾರಿಯಾಗಬಲ್ಲದು ಎಂದು ವೈದ್ಯ ರಾವ್ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಇತರ ಸೈಟೋಕಿನ್ಸ್ (ಇಂಟರ್ ಫೆರೋನ್) ಮಿಶ್ರಣ ತಯಾರಿಸಿ ಅದನ್ನು ಕೋವಿಡ್ 19 ರೋಗಿಯ ದೇಹಕ್ಕೆ ಚುಚ್ಚು ಮದ್ದಿನ ಮೂಲಕ ನೀಡಿ ರೋಗ ನಿರೋಧಕ ಶಕ್ತಿಯನ್ನು ಮರು ಸಕ್ರಿಯಗೊಳ್ಳುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಾವು ಈ ಬಗ್ಗೆ ಇನ್ನೂ ಪ್ರಾಥಮಿಕ ಹಂತದ ಪ್ರಯೋಗದಲ್ಲಿದ್ದೇವೆ. ಈ ವಾರಾಂತ್ಯದೊಳಗೆ ಮೊದಲ ಸೆಟ್ ಅನ್ನು ತಯಾರಿಸಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ. ಕೋವಿಡ್ 19 ಕುರಿತ ಲಸಿಕೆಗಾಗಿ ನಾವು ಪರಿಶೀಲನೆ ನಡೆಸಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆಇದಕ್ಕೂ ಮೊದಲು ನಾವು ರಾಜ್ಯ ಸರ್ಕಾರದ ಮುಂದೆ ಪ್ರಸೆಂಟ್ ಮಾಡುವ ಮೂಲಕ ಲಸಿಕೆ ಕುರಿತು ಮನವರಿಕೆ ಮಾಡುವುದಾಗಿ ತಿಳಿಸಿದ್ದಾರೆ.
Comments are closed.