ಕರ್ನಾಟಕ

ಇಂದಿನಿಂದ ಒಂದು ವಾರ ಎಚ್ಚರಿಕೆಯಿಂದ ಕಳೆದರೆ ನಿಶ್ಚಿಂತೆ; ತಜ್ಞ ವೈದ್ಯರಿಂದ ಎಚ್ಚರಿಕೆ

Pinterest LinkedIn Tumblr


ಬೆಂಗಳೂರು: ರಾಜ್ಯದ ಪಾಲಿಗೆ ಎಪ್ರಿಲ್‌ ಮೊದಲ ವಾರ ನಿರ್ಣಾಯಕ ಘಟ್ಟ. ಈ ವಾರವನ್ನು ಅತ್ಯಂತ ಎಚ್ಚರಿಕೆಯಿಂದ ಕಳೆದರೆ ನಿಶ್ಚಿಂತೆ. ತಪ್ಪಿದರೆ ಇನ್ನೂ ಒಂದು ತಿಂಗಳು ಗೃಹಬಂಧನ ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು…

ಯಾರಿಗಾದರೂ ಕೋವಿಡ್‌ 19 ತಗಲಿದ್ದರೆ ಕನಿಷ್ಠ 5 ದಿನಗಳಿಂದ ಗರಿಷ್ಠ 14 ದಿನಗಳಲ್ಲಿ ಸೋಂಕು ಲಕ್ಷಣ ಕಂಡುಬರಲಿದ್ದು, 14 ದಿನಗಳಲ್ಲಿ ಯಾವಾಗಲಾದರೂ ಆತ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಒಂದು ವೇಳೆ ಅಂತಹ ಲಕ್ಷಣ ಕಂಡುಬಂದಲ್ಲಿ ಮುಂದಿನ ಸುಮಾರು 10 ದಿನಗಳ ಕಾಲ ರೋಗದಿಂದ ಬಳಲುತ್ತಾನೆ!

ವೈದ್ಯರ ಈ ತರ್ಕದ ಪ್ರಕಾರ ವಿದೇಶದಿಂದ ಬಂದ ಕೋವಿಡ್‌ 19 ಸೋಂಕಿಗೆ ವಿಮಾನ ನಿಲ್ದಾಣಗಳೇ ಹೆಬ್ಟಾಗಿಲಾಗಿವೆ. ವಿದೇಶದಿಂದ ಬರುವ ವಿಮಾನಗಳನ್ನು ಬಂದ್‌ ಮಾಡಿ ಸದ್ಯ 8 ದಿನಗಳಾಗಿವೆ. ಅದಕ್ಕೂ ಹಿಂದೆ ವಿದೇಶದಿಂದ ಬಂದವರು ಸೋಂಕಿಗೊಳಗಾಗಿದ್ದರೆ ಇನ್ನು ಒಂದು ವಾರದಲ್ಲಿ ಪತ್ತೆಯಾಗುತ್ತದೆ. ಹೀಗಾಗಿ ಮುಂದಿನ ಒಂದು ವಾರ ರಾಜ್ಯದ ಪಾಲಿಗೆ ನಿರ್ಣಾಯಕ ಘಟ್ಟ.

ಹಾಗಾಗಿ ಲಾಕ್‌ಡೌನ್‌ ಪಾಲನೆಯಾದರೆ ಆತಂಕ ಶೇ.70ರಷ್ಟು ಕಡಿಮೆಯಾಗಲಿದೆ. ಜನ ಮೈಮರೆತು ಸೋಂಕಿಗೆ ಒಳಗಾದರೆ ಮತ್ತೆ ಲಾಕ್‌ಡೌನ್‌ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂಬುದು ತಜ್ಞರು ಮಾತು.

35 ಸಾವಿರ ಸಾವು
ದಿನದಿಂದ ದಿನಕ್ಕೆ ಜಗತ್ತಿನಾದ್ಯಂತ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೋಮವಾರ ಸಂಜೆ ವೇಳೆಗೆ ಒಟ್ಟಾರೆಯಾಗಿ 35 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯೇ ಅಗ್ರ ಸ್ಥಾನದಲ್ಲಿದ್ದು, ಇಲ್ಲಿ 10,779 ಮಂದಿ ಮೃತಪಟ್ಟಿದ್ದಾರೆ. ಸ್ಪೇನ್‌ 2ನೇ ಸ್ಥಾನದಲ್ಲಿದ್ದು, 7,340 ಮಂದಿ ಸಾವನ್ನಪ್ಪಿದ್ದಾರೆ.

1,56,380 ಮಂದಿ ಚೇತರಿಕೆ
ಸೋಂಕು ಪೀಡಿತರು, ಮೃತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಶುಭ ಸುದ್ದಿಯಾಗಿ ಜಗತ್ತಿನಾದ್ಯಂತ ಚೇತರಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಚೀನದಲ್ಲಿ 75,916, ಸ್ಪೇನ್‌-16,780, ಇರಾನ್‌- 13,030, ಇಟಲಿ- 13,030 ಮಂದಿ ಚೇತರಿಸಿಕೊಂಡಿದ್ದಾರೆ.

35 ಲಕ್ಷ ದಾಟಿದ ಸಂಖ್ಯೆ
ಸೋಂಕುಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸೋಮವಾರ 35 ಲಕ್ಷ ದಾಟಿದೆ. ಅಮೆರಿಕ ವೊಂದರಲ್ಲೇ 1.43 ಲಕ್ಷ ಪ್ರಕರಣಗಳು ಪತ್ತೆ ಯಾಗಿವೆ. ಇಟಲಿಯಲ್ಲಿಯೂ 97 ಸಾವಿರ ಪ್ರಕರಣ ದೃಢಪಟ್ಟಿವೆ. ಈಗ ಸ್ಪೇನ್‌ನಲ್ಲಿ ಕೂಡ ಹೆಚ್ಚಾಗಿದ್ದು, 85 ಸಾವಿರ ಪ್ರಕರಣ ದಾಖಲಾಗಿವೆ.

ಚೇತರಿಕೆ ಮಟ್ಟವೂ ಹೆಚ್ಚು
ಕೋವಿಡ್‌ 19ದಿಂದ ಕೇವಲ ಸಾವು ಸಂಭವಿಸುತ್ತಿದೆ. ಏನೋ ಆಗುತ್ತಿದೆ ಎಂದು ಹೆದರುವ ಅಗತ್ಯವಿಲ್ಲ. ಏಕೆಂದರೆ ಚೇತರಿಸಿಕೊಂಡವರ ಸಂಖ್ಯೆಯೂ ಹೆಚ್ಚಿದೆ. ಸೋಮವಾರದ ವೇಳೆಗೆ ಚೇತರಿಸಿಕೊಂಡವರ ಸಂಖ್ಯೆ 100 ದಾಟಿದೆ.

10ಕ್ಕೇರಿದ ಸಾವಿನ ಸಂಖ್ಯೆ
ನೆರೆಯ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಮವಾರ 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಈ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 10ಕ್ಕೆ ಏರಿದೆ.

ಕೋವಿಡ್‌ 19 ವಿಚಾರದಲ್ಲಿ ಅದೃಷ್ಟವಶಾತ್‌ ಭಾರತವಿನ್ನೂ ಚೀನ ಅಥವಾ ಐರೋಪ್ಯ ದೇಶಗಳ ಸ್ಥಿತಿಯನ್ನು ಮುಟ್ಟಿಲ್ಲ. ಆದರೂ ಮಾ.30ರ ವೇಳೆಗೆ ದೇಶದ ಒಟ್ಟಾರೆ ಸಂಖ್ಯೆ 1,100 ಮುಟ್ಟಿದೆ. ಇದು ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಎಂದು ಹೇಳಬಹುದಾದರೂ ಮುಂದಿನ ದಿನಗಳು ಕಠಿನವಾಗಿವೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಈ ಸೋಂಕು ದೇಶದಲ್ಲಿ ಹೇಗೆ ದಿನದಿಂದ ದಿನಕ್ಕೆ ಹರಡಿದೆ ಎಂಬ ನೋಟ ಇಲ್ಲಿದೆ.

ವಿದೇಶಗಳಿಗೆ ಸೋಂಕು ಪ್ರವೇಶಿಸಿದ ಬಳಿಕ 20ರಿಂದ 30ನೇ ದಿನ ಅತ್ಯಂತ ಹೆಚ್ಚು ಮಂದಿಯಲ್ಲಿ ದೃಢಪಟ್ಟಿದೆ. ರಾಜ್ಯಕ್ಕೆ ಸೋಂಕು ಕಾಲಿಟ್ಟು 22 ದಿನಗಳಾಗಿದ್ದು, ಮುಂದಿನ ಒಂದು ವಾರ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಸಾರ್ವಜನಿಕರು ಕಳೆಯಬೇಕು.
– ಡಾ| ಸಿ.ಎನ್‌. ಮಂಜುನಾಥ್‌,
ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ

Comments are closed.