ಮಡಿಕೇರಿ: ಜಾರ್ಖಂಡ್ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಲಾಕ್‍ಡೌನ್ ಘೋಷಣೆಯಾದ ದಿನಗಳಿಂದಲೂ ಟ್ರಕ್‍ನಲ್ಲೇ ಜೀವನ ನಡೆಸುತ್ತಿರುವುದು ಮಡಿಕೇರಿಯ ಹಾಕಿ ಕ್ರೀಡಾಂಗಣದ ಎದುರು ಕಂಡು ಬಂದಿದೆ.
ಜಾರ್ಖಂಡ್ ರಾಜ್ಯದಿಂದ ಸುಮಾರು 10 ಕೂಲಿ ಕಾರ್ಮಿಕರು ಬಿಎಸ್‍ಎನ್‍ಎಲ್ ಕೇಬಲ್ ಕೆಲಸಕ್ಕೆ ಬಂದಿದ್ದರು. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ ಪರಿಣಾಮ ಇವರೆಲ್ಲರಿಗೂ ಕೆಲಸವೂ ಇಲ್ಲದೆ ಹಲವು ದಿನಗಳಿಂದ ಟ್ರಕ್‍ನಲ್ಲೇ ಕಾಲ ಕಳೆಯುತ್ತಿದ್ದಾರೆ. ಅಲ್ಲೇ ಅಡುಗೆ-ಊಟ ತಯಾರಿಸಿಕೊಂಡು ಪಕ್ಕದಲ್ಲೇ ಟ್ಯಾಂಕರ್ ವೊಂದರ ನೀರನ್ನು ಉಪಯೋಗಿಸಿಕೊಂಡು ಜೀವನ ಮಾಡುತ್ತಿದ್ದಾರೆ.
ನಮ್ಮ ಮಾಲೀಕರು ದಿನ ಬಿಟ್ಟು ದಿನ ಆಹಾರ ತಂದು ಕೊಡುತ್ತಿದ್ದಾರೆ. ಎಲ್ಲರೂ ಲಾರಿಯಲ್ಲೇ ಮಗಲುತ್ತಿದ್ದೇವೆ. ಅಷ್ಟು ಸಮಸ್ಯೆ ಆಗುತ್ತಿಲ್ಲ. ಆದರೆ ಹೊರಗೆ ಶೌಚಾಲಯಕ್ಕೆ ಹಾಗೂ ಕುಡಿಯಲು ನೀರಿಲ್ಲ. ಹೊರಗೆ ಹೋಗಬೇಕಾದರೆ ಮಾಸ್ಕ್ ಧರಿಸಬೇಕು. ಹಲವೆಡೆ ವಿಚಾರಿಸಿದರೂ ಮಾಸ್ಕ್ ಗಳೇ ಸಿಗುತ್ತಿಲ್ಲ. ಮಾಸ್ಕ್ ಧರಿಸದಿದ್ದರೆ ಪೊಲೀಸರು ಗದರಿಸುತ್ತಾರೆ. ನಮಗೆ ಆಹಾರಕ್ಕಿಂತ ಮುಖ್ಯವಾಗಿ ಮಾಸ್ಕ್ ಗಳ ಅಗತ್ಯವಿದೆ. ಯಾರಾದರೂ ಮಾಸ್ಕ್ ಕೊಟ್ಟರೆ ಬಹಳ ಅನುಕೂಲ ಆಗುತ್ತೆ ಎಂದು ಅಳಲು ತೋಡಿಕೊಂಡಿದ್ದಾರೆ.
Comments are closed.