ಕರ್ನಾಟಕ

ತನ್ನ ಹೆಂಡತಿಯ ಹತ್ಯೆ ಮಾಡಿದ ಪೊಲೀಸ್‌ ಪೇದೆ ಸೇರಿ 7 ಜನರ ಬಂಧನ

Pinterest LinkedIn Tumblr


ವಿಜಯಪುರ: ವಿಕಲಚೇತನ ಮಹಿಳೆಯನ್ನು ಕೊಲೆ ಮಾಡಿದ ಪೇದೆ ಸೇರಿದಂತೆ 7 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಿಸಿದ 4 ಬೈಕ್‍ಗಳನ್ನು ಹಾಗೂ ಶವವನ್ನು ಒಯ್ದ ಒಂದು ಏರ್ ಬ್ಯಾಗ್‍ನ್ನು ವಶಪಡಿಸಿಕೊಂಡಿಸಿದ್ದಾರೆ.

ವಿಜಯಪುರ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ ನಿವಾಸಿ ನಿಂಗಾರಾ ಉದ್ದಂಡಪ್ಪ ವಾಲೀಕಾರ (31), ಮಸೂತಿ ಗ್ರಾಮದ ಪರಸಪ್ಪಾ ಶ್ರೀಶೈಲ ಹರಿಜನ (30) ತಾನಾಜಿ ಭೀಮಶಿ ಕ್ವಾಟೆ (27) ಬಾಬು ಮಲಿಕಸಾಬ ನದಾಫ (37), ತೀರ್ಥಪ್ಪಾ ತಾಯಿ ಬಾಯವ್ವಾ ಮಾದರ (38), ವಿಜಯಪುರದ ರಮೇಶ ವಾಲಿಕಾರ (21), ಪ್ರವೀಣ ಚಂದ್ರಾಮ ಸಾತಿಹಾಳ (25) ಬಂಧಿತ ಆರೋಪಿಗಳು ಎಂದು ಎಸ್ಪಿ ಅನುಮಪ ಅಗರವಾಲ ತಿಳಿಸಿದರು.

ಪ್ರಮುಖ ಆರೋಪಿ ಪೊಲೀಸ್ ಇಲಾಖೆಯಲ್ಲಿ ಶ್ವಾನದಳ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ನಿಂಗರಾಜ ವಾಲಿಕಾರ ಹಾಗೂ ವಿಶೇಷ ಚೇತನ ಮಹಿಳೆ ಸುಮಂಗಲಾ ಫೇಸ್ ಬುಕ್‍ನಲ್ಲಿ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ವಿವಾಹವಾಗಿದ್ದರು.

ಆದರೆ ಪತಿ-ಪತ್ನಿಯ ಮಧ್ಯೆ ಕಳೆದ ಕೆಲ ದಿನಗಳಿಂದ ವೈಮನಸ್ಸು ಉಂಟಾಗಿ, ಜಗಳವಾಡುತ್ತಿದ್ದರು. ಪತ್ನಿಯ ವರ್ತನೆಗೆ ಬೇಸತ್ತ ನಿಂಗರಾಜ ಕೊನೆಗೆ ನಾಲ್ವರು ಸ್ನೇಹಿತರ ನೆರವಿನೊಂದಿಗೆ ಮಾರಕಾಸ್ತ್ರದಿಂದ ಏ. 2 ರಂದು ಪತ್ನಿಯ ಕೊಲೆಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾನೆ. ಅಲ್ಲದೇ, ಇನ್ನಿಬ್ಬರು ಸಹಾಯದಿಂದ ಶವವನ್ನು ಮಸೂತಿ ಗ್ರಾಮದ ಬಳಿ ಹೂತು ಹಾಕಿ ಪರಾರಿಯಾಗಿದ್ದರು ಎಂದು ಎಸ್ಪಿ ತಿಳಿಸಿದರು. ಶನಿವಾರ ಮಸೂತಿ ಗ್ರಾಮಕ್ಕೆ ತೆರಳಿ, ತಹಸೀಲ್ದಾರ್ ಮತ್ತು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಪಂಚನಾಮೆ ಮಾಡಿಸಿದ್ದಾಗಿ ಎಸ್ಪಿ ತಿಳಿಸಿದರು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುವುದಾಗಿ ಎಸ್ಪಿ ವಿವರಿಸಿದರು.

Comments are closed.