ರಾಮನಗರ(ಏ. 04): ಕೊರೋನಾ ಎಂಬ ಮಾರಕ ಖಾಯಿಲೆ ಬಂದ ಬಳಿಕ ಮೊದಲ ಬಾರಿಗೆ ಇವತ್ತು ಉಪ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ್, ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೋವಿಡ್ 19 ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತ ಸಜ್ಜಾಗಿರುವ ಕುರಿತು ಚರ್ಚೆ ನಡೆಸಿದರು. ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ, ಸಿಇಓ ಇಕ್ರಂ, ಎಸ್ಪಿ ಡಾ.ಅನೂಪ್ ಶೆಟ್ಟಿ, ಡಿಹೆಚ್ ಓ ಡಾ.ನಿರಂಜ್ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ಡಿಸಿಎಂ, ಮುಂದಿನ 4 ತಿಂಗಳು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕೆಂದರು. ಈ ಮೂಲಕ ದೇಶ ಮುಂದಿನ 4 ತಿಂಗಳು ಲಾಕ್ ಡೌನ್ ಆಗಬಹುದೆಂದು ಸುಳಿವು ಕೊಟ್ಟರು.
ರಾಮನಗರದ ರೇಷ್ಮೆ ಮಾರ್ಕೆಟ್ ನ 4 ಕಡೆಗಳಲ್ಲಿ ವಿಂಗಡನೆ ಮಾಡುವ ಯೋಚನೆ ಇದೆ. ವೈರಸ್ ತಡೆಗಾಗಿ ಈ ಕ್ರಮದ ಬಗ್ಗೆ ಚರ್ಚೆ ನಡೆಸಲಾಗ್ತಿದೆ. ಮುಂದಿನ 4 ತಿಂಗಳಿಗೆ ಮರುಬಳಕೆ ಮಾಡುವ ಮಾಸ್ಕ್ ತಯಾರಿಗೆ ಚಿಂತನೆ ನಡೆಯುತ್ತಿದೆ. ಜಿಲ್ಲೆಯಲ್ಲಿ 100 ಬೆಡ್ ನ ಕೋವಿಡ್ ಆಸ್ಪತ್ರೆಯನ್ನ 200 ಬೆಡ್ ಗೆ ಏರಿಸಲಾಗುತ್ತೆ. 250 ಬೆಡ್ ನ ನೂತನ ಜಿಲ್ಲಾಸ್ಪತ್ರೆ ಮುಂದಿನ 6 ತಿಂಗಳಲ್ಲಿ ಪ್ರಾರಂಭವಾಗಲಿದೆ. ಎಲ್ಲಾ ಜಿಲ್ಲೆಯಲ್ಲೂ ಕನಿಷ್ಟ 25 ವೆಂಟಿಲೇಟರ್ ಇರಬೇಕು. ರಾಮನಗರ ಜಿಲ್ಲೆಯಲ್ಲೂ ಆ ವ್ಯವಸ್ಥೆ ಮಾಡುತ್ತೇವೆ ಎಂದರು.
ಇನ್ನು ರಾಮನಗರದಲ್ಲಿ ರೇಷ್ಮೆ ಮಾರ್ಕೆಟ್ ಓಪನ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸರ್ವಪಕ್ಷ ಸಭೆಯಲ್ಲಿ ಈ ಇಬ್ಬರು ನಾಯಕರು ಸಿಎಂ ಗೆ ಒತ್ತಾಯ ಮಾಡಿದ್ದರು. ಇನ್ನು ಮಾವು ಮಾರ್ಕೆಟ್ ಸಹ ಓಪನ್ ಆಗಲಿದೆ. 3 ಕಡೆಗಳಲ್ಲಿ ಮಾರ್ಕೆಟ್ ತೆರೆಯಲು ಪ್ಲ್ಯಾನ್ ಮಾಡಿದ್ದೇವೆ. ಖಾಸಗಿ ಸಂಸ್ಥೆಯವರು ಸಹ ಮಾರ್ಕೆಟ್ ತೆರೆಯಲು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ರು.
Comments are closed.