ಕರ್ನಾಟಕ

ಲಾಕ್‌ಡೌನ್: ಹೃದಯಾಘಾತದಲ್ಲಿ ಗಣನೀಯ ಇಳಿಮುಖ

Pinterest LinkedIn Tumblr


ಮೈಸೂರು: ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಭಾರತ ಲಾಕ್‌ಡೌನ್‌ ಆದ ಬಳಿಕ ಹೃದಯಾಘಾತದ ಪ್ರಮಾಣದಲ್ಲಿ ಗಣನೀಯ ಇಳಿಮುಖ ಕಂಡು ಬಂದಿದ್ದು, ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬದಲಾದ ಜೀವನ ಶೈಲಿ ಹಾಗೂ ಆಹಾರ ಇದಕ್ಕೆ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.

ರಾಜ್ಯದ ಆಸ್ಪತ್ರೆಗಳಲ್ಲಿ ನಿತ್ಯ ನೂರಾರು ಜನರು ಹೃದಯಾಘಾತದಿಂದ ತುರ್ತು ಚಿಕಿತ್ಸೆಗೆ ದಾಖಲಾಗುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಇದಕ್ಕೆ ಮಾನಸಿಕ ಒತ್ತಡ ಮುಖ್ಯ ಕಾರಣವಾಗಿತ್ತು.”ಲಾಕ್‌ಡೌನ್‌ ಬಳಿಕ ರೋಗಿಗಳ ಸಂಖ್ಯೆಯಲ್ಲಿ ಶೇ. 50ರಿಂದ 80ರಷ್ಟು ಇಳಿಮುಖವಾಗಿದೆ. ಬರುತ್ತಿರುವವರಲ್ಲಿ ಕಾಲ ಕಾಲಕ್ಕೆ ತಪಾಸಣೆ ಹಾಗೂ ಚಿಕಿತ್ಸೆಗೆ ಬರುವವರೇ ಹೆಚ್ಚು. ಹೊಸದಾಗಿ ಹೃದಯಾಘಾತವಾಗಿರುವುದು ಬೆರಳೆಣಿಕೆ ಮಾತ್ರ” ಎಂದು ಮೈಸೂರು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸದಾನಂದ್‌ ಹೇಳುತ್ತಾರೆ.

”ರಾಜ್ಯದ ಬಹುತೇಕ ಎಲ್ಲಾಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ಕಡಿಮೆ ಇದೆ. ಹೃದ್ರೋಗಕ್ಕೆ ಸಂಬಂಧಿಸಿದಂತೆ ರೋಗಿಗಳು ಚಿಕಿತ್ಸೆಯನ್ನು ಮುಂದೂಡಲು ಸಾಧ್ಯವಿಲ್ಲ. ಅದರಲ್ಲಿಯೂ ಹೃದಯಾಧಿಘಾತಕ್ಕೆ ತುರ್ತು ಚಿಕಿತ್ಸೆಯ ಅಗತ್ಯ ಇರುವುದರಿಂದ ಅಂತಹವರು ಆಗಮಿಸುತ್ತಾರೆ. ಹೃದ್ರೋಗಕ್ಕೆ ಸಂಬಂಧಿಸಿದಂತೆ ರೋಗಿಗಳು ಬಾರದಿರುವುದಕ್ಕೆ ಚಿಕಿತ್ಸೆ ಮುಂದೂಡಿರುವುದು ಕಾರಣವಲ್ಲ. ಹೃದಯಾಘಾತವಾಗುವುದೇ ಗಣನೀಯವಾಗಿ ಇಳಿಮುಖವಾಗಿದೆ,” ಎಂದು ಅವರು ಮಾಹಿತಿ ನೀಡಿದರು.

Comments are closed.