ಕೊಡಗು(ಏ.15): ಮೈಗ್ರೇಷನ್ ಕೋರ್ಸ್‍ಗೆಂದು ಮಧ್ಯ ಪ್ರದೇಶಕ್ಕೆ ಹೋಗಿದ್ದ ಕೊಡಗಿನ 21 ವಿದ್ಯಾರ್ಥಿಗಳು ಮಧ್ಯ ಪ್ರದೇಶದ ಇಂದೋರ್ ನಲ್ಲಿ ಸಿಲುಕಿದ್ದಾರೆ. ಗಾಳಿಬೀಡು ನವೋದಯ ಶಾಲೆಯ 9 ನೇ ತರಗತಿಯ 11 ವಿದ್ಯಾರ್ಥಿನಿಯರು ಹಾಗೂ 10 ತರಗತಿಯ 10 ವಿದ್ಯಾರ್ಥಿಗಳು ಕಳೆದ ಜುಲೈ ತಿಂಗಳಲ್ಲಿ ಹೋಗಿದ್ದರು.
ಕೊಡಗಿನಿಂದ ಮಧ್ಯಪ್ರದೇಶದ ಇಂದೋರ್ನ ಮಾನ್ಪುರ್ ಶಾಲೆಗೆ ಹೋಗಿದ್ದರು. ಪರೀಕ್ಷೆಗಳು ಮುಗಿದಿದ್ದರಿಂದ ಇದೇ ಮಾರ್ಚ್ 21 ಕ್ಕೆ ವಿದ್ಯಾರ್ಥಿಗಳು ಕೊಡಗಿಗೆ ಹಿಂದಿರುಗಬೇಕಿತ್ತು. ಅದಕ್ಕಾಗಿ ಮೈಸೂರಿಗೆ ಟಿಕೆಟ್ ಬುಕಿಂಗ್ ಕೂಡ ಆಗಿತ್ತು. ಆದರೆ, ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವನ್ನೇ ಲಾಕ್‍ಡೌನ್ ಮಾಡಿದ್ದರಿಂದ ವಿದ್ಯಾರ್ಥಿಗಳು ವಾಪಸ್ ಆಗಲು ಸಾಧ್ಯವೇ ಆಗಿಲ್ಲ.
ಅತ್ತ ವಿದ್ಯಾರ್ಥಿಗಳು, ಏನಾಗುವುದೋ ಎಂಬ ಆತಂಕದಲ್ಲಿದ್ದರೆ, ಇತ್ತ ಪೋಷಕರನ್ನು ತಮ್ಮ ಮಕ್ಕಳನ್ನು ಕರೆತರುವಂತೆ ಗಾಳಿಬೀಡಿನಲ್ಲಿ ನವೋದಯ ಶಾಲೆಯ ಪ್ರಾಚಾರ್ಯರಿಗೆ ಮನವಿ ಮಾಡಿದ್ದಾರೆ.
Comments are closed.