ಕರ್ನಾಟಕ

ಕೊರೋನಾ: ರಾಜ್ಯದಲ್ಲಿ 10 ಪಾಸಿಟಿವ್​​ ಪ್ರಕರಣ: 418ಕ್ಕೇರಿದ ಸೋಂಕಿತರ ಸಂಖ್ಯೆ

Pinterest LinkedIn Tumblr

ಬೆಂಗಳೂರು(ಏ.22): ರಾಜ್ಯದಲ್ಲಿ ಕೊರೋನಾ ವೈರಸ್​ ವ್ಯಾಪಕವಾಗಿ ಹರಡುತ್ತಿದೆ. ಇದರ ಪರಿಣಾಮ ಇಂದು 9 ಹೊಸ ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಕಲಬುರ್ಗಿಯಲ್ಲಿ 3, ವಿಜಯಪುರದಲ್ಲಿ 3, ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ 2 ಹಾಗೂ ಬೆಳಗಾವಿಯಲ್ಲಿ ಒಂದು ಹೊಸ ಪ್ರಕರಣ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಇದುವರೆಗೂ 427 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 131 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಜತೆಗೆ 17 ಮಂದಿ ಮೃತಪಟ್ಟಿದ್ದಾರೆ. ಸದ್ಯ ಓರ್ವ ಗರ್ಭಿಣಿ ಸೇರಿದಂತೆ 274 ಮಂದಿ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 5 ಮಂದಿ ಐಸಿಯುನಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, 427 ಕೇಸುಗಳ ಪೈಕಿ ಬೆಂಗಳೂರು ನಗರ- 91, ಮೈಸೂರು- 88, ಬೆಳಗಾವಿ- 43, ಬಾಗಲಕೋಟೆ- 21, ಬಳ್ಳಾರಿ- 13, ಬೆಂಗಳೂರು ಗ್ರಾಮಾಂತರ- 12, ಬೀದರ್​​- 15, ಚಿಕ್ಕಬಳ್ಳಾಪುರ- 16, ದಕ್ಷಿಣ ಕನ್ನಡ- 15, ಚಿತ್ರದುರ್ಗ- 1, ದಾವಣಗೆರೆ- 2, ಧಾರವಾಡ- 7, ಗದಗ- 4, ಕಲಬುರ್ಗಿ- 35, ಕೊಡಗು- 1, ಮಂಡ್ಯ- 12, ತುಮಕೂರು- 2, ಉಡುಪಿ- 3, ಉತ್ತರ ಕನ್ನಡ- 11, ವಿಜಯಪುರ 35 ಪ್ರಕರಣಗಳು ಪತ್ತೆಯಾಗಿವೆ.

ಈ ಮಧ್ಯೆ ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಕಾಣಸಿಕೊಂಡಿರು ಕಂಟೈನ್ಮೆಂಟ್‌ ಝೋನ್‌ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಲಾಕ್​​ಡೌನ್ ನಿರ್ಬಂಧ‌ ಸಡಿಲಗೊಳಸಿ ಸರ್ಕಾರ ಆದೇಶಿಸಿದೆ. ಡಾಬಾ, ಕಟ್ಟಡ ನಿರ್ಮಾಣ ಕಾಮಗಾಗಿ, ಕೊರಿಯರ್‌ ಸೇವೆ, ಲಾರಿ ರಿಪೇರಿ ಮಾಡುವ ಗ್ಯಾರೇಜ್ ಸೇರಿದಂತೆ‌ ಕೆಲವೊಂದು ಅಗತ್ಯ ಸೇವೆಗಳಿಗೆ ಲಾಕ್​​ಡೌನ್‌ ಮಾಡಲಾಗಿದೆ. ಮಾಲ್‌, ಚಿತ್ರಮಂದಿರ, ಆಟೋ, ವಿಮಾನ, ರೈಲು ಸಂಚಾರ, ಕ್ಯಾಬ್‌ ಮೊದಲಾದ ಸೇವೆಗಳಿಗೆ ಇರುವ ನಿರ್ಬಂಧ ಎಂದಿನಂತೆಯೇ ಮುಂದುವರೆಯಲಿದೆ.

Comments are closed.