ಹುಬ್ಬಳ್ಳಿ (ಏಪ್ರಿಲ್ 22); ಕೊರೋನಾಗೆ ಇಡೀ ದೇಶ ಮತ್ತು ರಾಜ್ಯ ತತ್ತರಿಸಿದ್ದು, ಹುಬ್ಬಳ್ಳಿಯಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಮುಲ್ಲಾ ಓಣಿಯ ಕೊರೊನಾ ಸೋಂಕಿತ ಪೇಷಂಟ್ ನಂಬರ್- 194ರ ಕುಟುಂಬಸ್ಥರಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ದೃಢಪಟ್ಟಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೆಹಲಿ ಪ್ರವಾಸ ಮಾಡಿದ್ದ ಯುವಕನಲ್ಲಿ ಮೊದಲು ಕೊರೊನಾ ಪತ್ತೆಯಾಗಿತ್ತು. ಈಗ ಆತನ ಅಣ್ಣ ಮತ್ತು ಅಣ್ಣನ ಮೂವರು ಮಕ್ಕಳಲ್ಲಿ ವೈರಾಣು ಪತ್ತೆಯಾಗಿದೆ. ಪಿ-233, ಐದು ವರ್ಷದ ಗಂಡು ಮಗು, ಪಿ-234 ಮೂರುವರೆ ವರ್ಷದ ಗಂಡುಮಗು, ಪಿ-235 ಏಳು ವರ್ಷದ ಹೆಣ್ಣುಮಗು ಮತ್ತು ಪಿ-236, 37 ವರ್ಷ ವಯಸ್ಸಿನ ಪುರುಷ ಎಂದು ಗುರುತಿಸಲಾಗಿದೆ.
ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟಪಡಿಸಿದ್ದಾರೆ. ಮುಲ್ಲಾ ಓಣಿ ಸುತ್ತ ಸೀಲ್‌ಡೌನ್ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಜನ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
Comments are closed.