ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್ಡೌನ್ಅನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತಷ್ಟು ಸಡಿಲ ಮಾಡಲಾಗಿದೆ. ನೆನ್ನೆ ಕೆಲವೊಂದು ಕ್ಷೇತ್ರಗಳಿಗೆ ಲಾಕ್ಡೌನ್ಗೆ ವಿನಾಯಿತಿ ನೀಡಲಾಗಿತ್ತು. ಇದೀಗ ಮತ್ತಷ್ಟು ಅಂಗಡಿ, ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಲಾಗುತ್ತಿದೆ.
ಪುಸ್ತಕ ಮಳಿಗೆ, ಫ್ಯಾನ್ ಮಾರಾಟ, ಮೊಬೈಲ್ ರೀಚಾರ್ಜ್ ಅಂಗಡಿ, ತೆಂಗಿನಕಾಯಿ, ಅಡಿಕೆ ಮಾರಾಟ ಹಾಗೂ ಮೈಕ್ರೋ ಫೈನಾನ್ಸ್, ಸಣ್ಣ ಹಣಕಾಸು, ಗೃಹ ಸಾಲ ಸಂಸ್ಥೆ ತೆರೆಯಲು ಅನುಮತಿ ನೀಡಲಾಗಿದೆ. ಹಾಗೆಯೇ ಡ್ರೈ ಫ್ರೂಟ್ಸ್, ಐಸ್ ಕ್ರೀಮ್, ಜ್ಯೂಸ್ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಇಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಲಾಗಿದೆ. ನಗರಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಹಿಟ್ಟಿನ ಗಿರಣಿ, ಬೇಳೆ ಕಾಳುಗಳ ಮಿಲ್, ಸಾಂಬಾರು ಪದಾರ್ಥಗಳ ಮಾರಾಟ, ಹಾಲು ಉತ್ಪನ್ನಗಳ ಸಂಸ್ಕರಣ ಘಟಕಕ್ಕೆ ಒಪ್ಪಿಗೆ ನೀಡುವ ಮೂಲಕ ವಿವಿಧ ವಲಯಗಳಿಗೆ ಸರ್ಕಾರ ಆದ್ಯತೆ ನೀಡಿದೆ. ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಆರ್ಥಿಕ ಚೇತರಿಕೆಗಾಗಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
Comments are closed.