ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 15 ಕೊರೋನಾವೈರಸ್ ಪ್ರಕರಣ ಪತ್ತೆಯಾಗಿದ್ದು, ಒಟ್ಟಾರೇ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ ಆಗಿದೆ.19 ಮಂದಿ ಮೃತಪಟ್ಟಿದ್ದು, 193 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಮಾಹಿತಿ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ವಿಜಯಪುರ ಜಿಲ್ಲೆಯಲ್ಲಿ 2, ಮಂಡ್ಯ ಜಿಲ್ಲೆಯಲ್ಲಿ 2, ಬಾಗಲಕೋಟೆಯಲ್ಲಿ 2 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಪ್ರಕರಣ ಇಂದು ಪತ್ತೆಯಾಗಿವೆ.
504ನೇ ಪ್ರಕರಣದ ರೋಗಿ ಬೆಂಗಳೂರಿನ 13 ವರ್ಷದ ಹುಡುಗ ನಾಗಿದ್ದರೆ, 505ನೇ ಪ್ರಕರಣದ ರೋಗಿ ಮಂಡ್ಯ ಜಿಲ್ಲೆ ನಾಗಮಂಗಲದವರಾಗಿದ್ದಾರೆ. ಇವರಿಗೆ ಮುಂಬೈ ,ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆಯಿದೆ.506 ಹಾಗೂ 507ನೇ ಪ್ರಕರಣದ ರೋಗಿಗಳು ಕ್ರಮವಾಗಿ 45 ವರ್ಷದ ಪುರುಷ ಹಾಗೂ 80 ವರ್ಷದ ಮಹಿಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಇವರಿಬ್ಬರು 432ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ್ಧವರಾಗಿದ್ದಾರೆ.
508 ಹಾಗೂ 509ನೇ ಪ್ರಕರಣದ ರೋಗಿಗಳು ಬಾಗಲಕೋಟೆ ಜಿಲ್ಲೆ ಜಮಖಂಡಿಯವರಾಗಿದ್ದು, 456ನೇ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದಾರೆ. 510 ಹಾಗೂ 511ನೇ ಸೋಂಕಿತರು ವಿಜಯಪುರ ಜಿಲ್ಲೆಯವರಾಗಿದ್ದಾರೆ.510ನೇ ಸೊಂಕಿತ 221ನೇ ಸಂಖ್ಯೆಯ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. 512ನೇ ರೋಗಿ ಮಂಡ್ಯ ಜಿಲ್ಲೆ ಮಳವಳ್ಳಿಯ 22 ವರ್ಷದ ಯುವತಿಯಾಗಿದ್ದಾರೆ.ಇವರು 371ನೇ ಸಂಖ್ಯೆಯ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದಾರೆ.ಇವರೆಲ್ಲರಿಗೂ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತೊಂದೆಡೆ ರಕ್ತದೊತ್ತಡ, ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ 50 ವರ್ಷದ ಬೆಂಗಳೂರಿನ ವ್ಯಕ್ತಿಯೊಬ್ಬರು ಇಂದು ನಿಧನರಾಗಿದ್ದಾರೆ.
Comments are closed.