ಕರ್ನಾಟಕ

ದೇಗುಲಗಳು ಬಂದ್ ಹಿನ್ನೆಲೆ ರಾಜ್ಯಕ್ಕೆ ರೂ.150 ಕೋಟಿ ನಷ್ಟ

Pinterest LinkedIn Tumblr


ಮೈಸೂರು; ಕೊರೋನಾ ವೈರಸ್ ರಾಜ್ಯದ ವಿವಿಧ ವಲಯಗಳ ಮೇಲೆ ಪರಿಣಾಮ ಬೀರಿದ್ದು, ಪ್ರಮುಖವಾಗಿ ರಾಜ್ಯದ ಆರ್ಥಿಕತೆಗೆ ಪ್ರಮುಖ ಮೂಲಕವಾಗಿದ್ದ ಪ್ರವಾಸೋದ್ಯಮ ಇಲಾಖೆಯ ಮೇಲಂತೂ ಭಾರೀ ಹೊಡೆತವನ್ನೇ ನೀಡಿದೆ. ಲಾಕ್’ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ದೇಗುಲಗಳು ಬಂದ್ ಆಗಿರುವ ಪರಿಮಾಮ ರಾಜ್ಯಕ್ಕೆ ರೂ.150ಕೋಟಿಯಷ್ಟು ನಷ್ಟ ಎದುರಾಗಿದೆ.

ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಬೇಸಿಗೆ ರಜೆ ಇರುತ್ತಿದ್ದ ಹಿನ್ನೆಲೆಯಲ್ಲಿ ದೇಗುಲಗಳಿಗೆ ಭೇಟಿ ನೀಡುವವರ ಸಂಖ್ಯೆ ಈ ಸಂದರ್ಭದಲ್ಲಿ ಹೆಚ್ಚಾಗಿರುತ್ತಿತ್ತು. ಎ ಶ್ರೇಣಿ ಪಡೆದಿರುವ ರಾಜ್ಯದ 200 ದೇಗುಲಗಳು ತಿಂಗಳಿಗೆ ರೂ.3-6 ಕೋಟಿ ಆದಾಯವನ್ನು ತರುತ್ತಿತ್ತು. ಲಾಕ್’ಡೌನ್ ಹಿನ್ನೆಲೆಯಲ್ಲಿ ದೇಗುಲಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಆಚರಣೆ ಹಾಗೂ ಸಂಪ್ರದಾಯದಂತೆ ದಿನಕ್ಕೆರಡು ಬಾರಿ ದೇಗುಲದ ಬಾಗಿಲು ತೆಗೆದು ಎಂದಿನಂತೆ ಪೂಜೆಗಳನ್ನು ನಡೆಸಲಾಗುತ್ತಿದೆ.

ಶಿವರಾತ್ರಿ ಸಂದರ್ಭದಲ್ಲಿ ಮಲ್ಲೇ ಮಹದೇಶ್ವರ ದೇಗುಲ ರೂ.5-6 ಕೋಟಿಯಷ್ಟು ಆದಾಯ ತಂದುಕೊಡುತ್ತಿತ್ತು. ಆದರೆ, ಈ ಬಾರಿ ಕೇವಲ ರೂ.3 ಕೋಟಿಯಷ್ಟು ಮಾತ್ರ ಆದಾಯ ಬಂದಿದೆ. ಇನ್ನು ಯುಗಾದಿ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದ್ದ ಜಾತ್ರೆಯನ್ನೂ ಕೂಡ ರದ್ದು ಮಾಡಿದ ಹಿನ್ನೆಲೆಯಲ್ಲಿ ರೂ.5 ಕೋಟಿಯಷ್ಟು ನಷ್ಟ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.

ಮುಜರಾಯಿ ಖಾತೆ ಸಚಿವ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಗುಲಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ರೂ.150 ಕೋಟಿಯಷ್ಟು ನಷ್ಟ ಎದುರಾಗಿದೆ. ಲಾಕ್’ಡೌನ್ ಮುಂದುವರೆದಿದ್ದೇ ಆದರೆ, ಆನ್’ಲೈನ್ ಮೂಲಕ ಸೇವೆ ಅರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ರಾಜ್ಯದ ಆದಾಯ ಕೂಡ ಉತ್ತಮ ಸ್ಥಿತಿಗೆ ತಲುಪಲು ಸಹಾಯವಾಗುತ್ತದೆ ಎಂದಿದ್ದಾರೆ.

Comments are closed.