ಬೆಂಗಳೂರು(ಏ.05): ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಆರ್ಭಟ ಭಾರತದಲ್ಲೂ ಮುಂದುವರಿದಿದೆ. ಈ ಮಾರಕ ಸೋಂಕಿಗೆ ಬಲಿಯಾಗುತ್ತಿರುವರ ಸಂಖ್ಯೆಯೂ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವೂ ಮೂರನೇ ಅವಧಿಗೆ ಮೇ 17ನೇ ತಾರೀಕಿನವರೆಗೂ ಲಾಕ್ಡೌನ್ ವಿಸ್ತರಿಸಿದೆ. ಇದೀಗ ರಾಜ್ಯ ಸರ್ಕಾರವೂ ಕರ್ನಾಟಕದಲ್ಲಿ ಲಾಕ್ಡೌನ್ ಸಡಿಲಗೊಳಿಸಿ ಮದ್ಯ ಮಾರಾಟಕ್ಕೆ ನಿನ್ನೆಯಿಂದಲೇ ಅವಕಾಶ ಮಾಡಿಕೊಟ್ಟಿದ್ದಾರೆ. ಇದರ ಪರಿಣಾಮ ಈಗ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಹೌದು, ನಿನ್ನೆಯಿಂದ ರಾಜ್ಯದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಕೇಸುಗಳು ಹೆಚ್ಚಾಗಿವೆ. ಈ ನಡುವೇ ಹೆಚ್ಚಾಗಿ ರಾತ್ರಿವೇಳೆ ವಾಹನ ಸವಾರರನ್ನು ತಡೆದು ನಿಲ್ಲಿಸಿ ತಪಾಸಣೆಗೆ ಒಳಪಡಿಸುವ ಸಂಚಾರಿ ಪೊಲೀಸರು ಕೂಡ ಕೊರೋನಾ ವೈರಸ್‌ಗೆ ಹೆದರಿದ್ದಾರೆ. ಈ ಕಾರಣದಿಂದ ಕುಡಿದು ವಾಹನ ಚಲಾಯಿಸುತ್ತಿದ್ದಾರೆಯೇ? ಎಂಬುದನ್ನು ಬಾಯಿಗೆ ಸಾಧನವೊಂದನ್ನು ಇಟ್ಟು ತಪಾಸಣೆ ಮಾಡುವ ಕಾರ್ಯವನ್ನು ಪೊಲೀಸರು ಕೈಬಿಟ್ಟಿದ್ದಾರೆ.
ಸದ್ಯ ಜನ ಆಸ್ಪತ್ರೆ, ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲೆಡೆ ಓಡಾಡುವಾಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ರೋಗದ ಆತಂಕ ಜನರಲ್ಲಿ ಈ ರೀತಿ ಇರಬೇಕಾದರೆ, ಬೆಂಗಳೂರು ನಗರ ಪೊಲೀಸರಿಗೂ ಮಾರಕ ಸೋಂಕು ಹರಡುವ ಭೀತಿ ಕಾಡುತ್ತಿದೆ. ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಯಾರಾದರೂ ಚಾಲಕನಿಂದ ನಮಗೂ ವೈರಸ್ ಬಂದರೇ ಕಷ್ಟ ಎಂದು ತಾತ್ಕಲಿಕವಾಗಿ ಇದನ್ನು ಸ್ಥಗಿತಗೊಳಿಸಿದ್ದಾರೆ.
Comments are closed.