ಕರ್ನಾಟಕ

ರಾಜ್ಯದ 14 ಜಿಲ್ಲೆಗಳನ್ನು ರೆಡ್ ಝೋನ್’ಗೆ ಸೇರಿಸಲು ಸರ್ಕಾರ ಚಿಂತನೆ

Pinterest LinkedIn Tumblr


ಬೆಂಗಳೂರು: ಲಾಕ್’ಡೌನ್ ಸಡಿಲಗೊಂಡ ಬಳಿಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏಕಾಏಕಿ ಗಣನೀಯವಾಗಿ ಏರಿಕೆಯಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದ್ದು, ಇದೀಗ ರಾಜ್ಯದ 14 ಜಿಲ್ಲೆಗಳನ್ನು ರೆಡ್ ಝೋನ್’ಗೆ ಸೇರ್ಪಡೆಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಲಾಕ್’ಡೌನ್ ಸಡಿಲಗೊಂಡ ಬಳಿಕ ಇದೀಗ ಆರೆಂಜ್ ಹಾಗೂ ಗ್ರೀನ್ ಝೋನ್ ನಲ್ಲಿಯೂ ಸೋಂಕಿತರು ಕಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 30 ಜಿಲ್ಲೆಗಳ ಪೈಕಿ 14 ಜಿಲ್ಲೆಗಳನ್ನು ರೆಡ್ ಝೋನ್”ಗೆ ಸೇರ್ಪಡೆಗೊಳಿಸುವಂತೆ ಈಗಾಗಲೇ ರಾಜ್ಯ ಸರ್ಕಾರ, ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ.

5ಕ್ಕಿಂತೂ ಹೆಚ್ಚು ಸೋಂಕಿತ ಪ್ರಕರಣಗಳು ಕಂಡು ಬಂದ ಎಲ್ಲಾ ಜಿಲ್ಲೆಗಳನ್ನು ರೆಡ್ ಝೋನ್’ಗೆ ಸೇರ್ಪಡೆಗೊಳಿಸುವಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ, ನಮ್ಮ ಮನವಿಗೆ ಕೇಂದ್ರ ಒಪ್ಪಿಗೆ ನೀಡಿಲ್ಲ. ಇದೀಗ ನಾವು ಕೇಂದ್ರದ ಮಾರ್ಗಸೂಚಿಯಂತೆ ಜಿಲ್ಲೆಗಳನ್ನು ವಿಭಾಗಿಸುತ್ತಿದ್ದೇವೆ. ಆದರೂ, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ.

ಜಿಲ್ಲಾ ಆಡಳಿತ ಮಂಡಳಿಗಳು ರೆಡ್ ಝೋನ್ ನಲ್ಲಿ ಕೈಗೊಂಡ ಕಠಿಣ ಕ್ರಮಗಳನ್ನು 5ಕ್ಕಿಂತಲೂ ಹೆಚ್ಚು ಸೋಂಕು ಕಂಡು ಬಂದ ಜಿಲ್ಲೆಗಳಲ್ಲಿ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಂಟೈನ್ಮೆಂಟ್ ಝೋನ್ ಪರಿಶೀಲಿಸುವ ಕಾರ್ಯಗಳು ಮುಂದುವರೆದಿವೆ. ಆರೆಂಜ್ ಜೋನ್ ನಲ್ಲಿಯೂ ನಾವು ಸೋಂಕಿತರೊಂದಿಗೆ ಪರೋಕ್ಷ ಸಂಪರ್ಕ ಹೊಂದಿರುವವರ ಗುರ್ತಿಸುವ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ರೆಡ್ ಝೋನ್ ನಲ್ಲಿ ಜನರ ಮನೆ ಬಾಗಿಲಿಗೆ ತೆರಳಿ ಸ್ಯಾಂಪಲ್ಸ್ ಸಂಗ್ರಹಿಸಿ ಪರೀಕ್ಷೆ ನಡೆಸಲು ಕೇಂದ್ರದಿಂದ ಅನುಮತಿ ಕೇಳಲಾಗಿದೆ. ಕೇಂದ್ರ ಸೂಚನೆಗೂ ಮುನ್ನವೇ ರಾಜ್ಯ ಸರ್ಕಾರ 14 ಜಿಲ್ಲೆಗಳನ್ನು ರೆಡ್ ಝೌನ್, 4 ಜಿಲ್ಲೆಗಳನ್ನ ಆರೆಂಜ್ ಹಾಗೂ 12 ಜಿಲ್ಲೆಗಳನ್ನು ಗ್ರೀನ್ ಝೋನ್ ಎಂದು ಗುರ್ತಿಸಿದೆ. ಗ್ರೀನ್ ಝೋನ್ ಎಂದು ಗುರ್ತಿಸಿದ ಬಳಿಕ ಕಳೆದ 28 ದಿನಗಳಿಂದ ಈ ಪ್ರದೇಶಗಳಲ್ಲಿ ಒಂದೂ ಪ್ರಕರಣಗಳೂ ಬೆಳಗಿಕೆ ಬಂದಿಲ್ಲ ಎಂದಿದ್ದಾರೆ.

Comments are closed.