ಕರ್ನಾಟಕ

ಕೊರೋನಾ ವೈರಸ್​​ ತಡೆಗೆ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಸಭೆಯ 13 ತೀರ್ಮಾನಗಳು

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಿಯಂತ್ರಿಸುವ ಸಂಬಂಧ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಚಿವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಇಂದು ಬಿ.ಎಸ್​ ಯಡಿಯೂರಪ್ಪ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಸಭೆಯಲ್ಲಿ ಸಚಿವರಾದ ಸುರೇಶ್ ಕುಮಾರ್. ಆರ್ ಅಶೋಕ್, ಸುಧಾಕರ್ ಅಶ್ವತ್ಥ್ ನಾರಾಯಣ ಹಾಗೂ ಗೋವಿಂದ್ ಕಾರಜೋಳ ಭಾಗಿಯಾಗಿದ್ದರು. ಇಲ್ಲಿ ಮುಂದೆ ಕೊರೋನಾ ತಹಬದಿಗೆ ತರಲು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಾಗಿ ಚರ್ಚೆ ಮಾಡಿದರು.

ಇನ್ನು, ಬೇರೆ ದೇಶ ಮತ್ತು ರಾಜ್ಯಗಳಿಂದ ಕನ್ನಡಿಗರು ವಾಪಸ್ ಬರುತ್ತಿದ್ದಾರೆ. ಇವರನ್ನು ಹೇಗೆ ಕ್ವಾರಂಟೈನ್ ಮಾಡಬೇಕು ಅನ್ನೋ ಬಗ್ಗೆಯೂ ಚರ್ಚೆಯಾಯ್ತು. ಈ ವಿಚಾರಗಳ ಜತೆಗೆ ನಾಳೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿಡಿಯೋ ಸಂವಾದಲ್ಲಿ ಏನು ಮಾತಾಡಬೇಕು ಎಂಬ ಸಲಹೆಗಳನ್ನು ಸಿಎಂ ಸಂಪುಟ ಸಹೋದ್ಯೋಗಿಗಳಿಂದ ಅಭಿಪ್ರಾಯ ಪಡೆದರು.

ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಹೀಗಿವೆ..

ಹೊರ ರಾಜ್ಯಾದಿಂದ ಬರುವ ಕನ್ನಡಿಗರು‌ ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು
ರಾಜ್ಯಕ್ಕೆ ಬರುವವರು ಕಡ್ಡಾಯ ಆನ್​​​ಲೈನ್​​ನಲ್ಲಿ ರಿಜಿಸ್ಟರ್ ಮಾಡಬೇಕು
ರಾಜ್ಯಕ್ಕೆ ಬರುವವರು‌ ಅನಿರ್ವಾಯವಾಗಿ ಹೊರ ರಾಜ್ಯಕ್ಕೋಗಿ ಸಿಕ್ಕಿಹಾಕಿ ಕೊಂಡಿರುವರು ಆಗಿರಬೇಕು
ಎಲ್ಲಿಗೆ ಬರುತ್ತೇವೆ ಮತ್ತು ಎಂದು ಬರುತ್ತೇವೆ ಅನ್ನೋದನ್ನ ರಿಜಿಸ್ಟರ್ ಮಾಡಬೇಕು
ಕ್ವಾರಂಟೈನ್ ಸೌಲಭ್ಯಕ್ಕೆ‌ ಅನುಗುಣವಾಗಿ ಕರೆಸಿಕೊಳ್ಳಲಾಗುವುದು
ಬಂದ ತಕ್ಷಣ ಯಾರು ಅವರ ಊರಿಗೆ ಹೋಗುವಂತಿಲ್ಲ
ಬಂದ ಎಲ್ಲರು 14 ದಿನ‌ ಕ್ವಾರಂಟೈನ್ ಆಗಲೇಬೇಕು
ಕ್ವಾರಂಟೈನ್ ಗೆ ಸಿದ್ದವಿದ್ದವರು ಮಾತ್ರ ನೊಂದಣಿ‌ ಮಾಡಿಕೊಳ್ಳಬೇಕು
ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸುತ್ತದೆ
ಬೇರೆ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರೂ ಇಲ್ಲಿಯು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಲೇಬೇಕು
ಇನ್ನು‌ ಮುಂದೆ ಬೇರೆ ರಾಜ್ಯದಲ್ಲಿ ಮೃತರಾದರೆ ಶವಗಳನ್ನು ರಾಜ್ಯಕ್ಕೆ ತರುವಂತಿಲ್ಲ
ಎಲ್ಲಿ ಮೃತರಾಗಿರುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು
ರಾಜ್ಯದಲ್ಲಿ ತೀರಿಕೊಂಡರೆ ತೀರಿಕೊಂಡ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು

Comments are closed.