ಕರ್ನಾಟಕ

ಲಾಕ್​​ಡೌನ್​​: ರಾಜ್ಯಕ್ಕೆ 10,675 ಕೋಟಿ ರೂ. ನಷ್ಟ

Pinterest LinkedIn Tumblr


ಬೆಂಗಳೂರು(ಮೇ.11): ಮಾರಕ ಕೊರೋನಾ ವೈರಸ್​​ ದಿನೇದಿನೇ ತೀವ್ರಗತಿಯಲ್ಲಿ ಹರಡುತ್ತಿದೆ. ಇದರ ಪರಿಣಾಮ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಇಡೀ ರಾಜ್ಯವನ್ನು ಲಾಕ್​​ಡೌನ್​​ ಮಾಡಿ ಬಹುತೇಕ ಸೇವೆಗಳನ್ನು ಸ್ತಬ್ಧಗೊಳಿಸಲಾಗಿತ್ತು. ಈ ಲಾಕ್​​​​ಡೌನ್​​ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ ರೂ.10,675 ಕೋಟಿ ನಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.

ಇಡೀ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​​ ಜಾರಿಗೊಳಿಸಿದ್ದ ಕಾರಣ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಬರಬೇಕಿದ್ದ ಎಲ್ಲಾ ಆದಾಯ ಸ್ಥಗಿತಗೊಂಡಿತ್ತು. ತೆರಿಗೆ, ಅಬಕಾರಿ, ಅಂಚೆ ಚೀಟಿ, ನೋಂದಾವಣಿ, ಸಾರಿಗೆ(ಮೋಟಾರು ವಾಹನ)ಗಳಿಂದ ಬರಬೇಕಿದ್ದ ಆದಾಯ ಬರದ ಕಾರಣ ಇಷ್ಟು ಪ್ರಮಾಣದಲ್ಲಿ ನಷ್ಟ ಆಗಿದೆ ಎನ್ನಲಾಗುತ್ತಿದೆ.

ಇನ್ನು, ಏಪ್ರಿಲ್​​ ತಿಂಗಳಿನಲ್ಲಿ ಮಾತ್ರ ವಾಣಿಜ್ಯ ತೆರಿಗೆ ರೂ.6,870.25 ಕೋಟಿ, ಅಬಕಾರಿ ರೂ.1,891.6, ಅಂಚೆ ಮತ್ತು ನೋಂದಾವಣಿ ರೂ.1,054 ಕೋಟಿ ಹಾಗೂ ಸಾರಿಗೆ ರೂ.592.91 ಕೋಟಿ ಸಂಗ್ರಹವಾಗಿಬೇಕಿತ್ತು. ಆದರೀಗ, 10,675 ಕೋಟಿ ರೂ. ನಷ್ಟವಾದ್ದರಿಂದ, 2020-2021ರ ಆರ್ಥಿಕ ವರ್ಷದಲ್ಲಿ ಸುಮಾರು 1/12 ನೇ ಅಂದಾಜು ಆದಾಯವನ್ನು ಕಳೆದುಕೊಳ್ಳಲಾಗಿದೆ.

ಸದ್ಯ ಲಾಕ್​​ಡೌನ್​​ ಸಡಿಲಗೊಳಿಸಿದ ಬಳಿಕ ಅಬಕಾರಿ ಸುಂಕದ ಹೆಚ್ಚಳವೂ 2,530 ಕೋಟಿ ರೂ. ತಂದುಕೊಟ್ಟಿದೆ. 2019ನೇ ವರ್ಷದ ನವೆಂಬರ್ ತಿಂಗಳರವರೆಗೆ ಜಿಎಸ್​​ಟಿ ಪರಿಹಾರ ಸ್ವೀಕರಿಸಿದ ಪರಿಣಾಮ 5,000 ಕೋಟಿ ರೂ. ಬಾಕಿಯಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಇನ್ನು, ಲಾಕ್​ಡೌನ್​ನಿಂದಾಗಿ ದೇಶದ ಖಾಸಗಿ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಸಾರಿಗೆ ಸಂಸ್ಥೆಗಳು, ಅಂಗಡಿಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ರಾಜ್ಯದ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, 1 ತಿಂಗಳಿಗೆ ಸಂಬಳ ನೀಡಲು 130 ಕೋಟಿ ರೂ. ಬೇಕು. ಇಷ್ಟು ದೊಡ್ಡ ಮೊತ್ತವಿಲ್ಲದ ಕಾರಣ ಸಾರಿಗೆ ನಿಗಮಗಳ ನೌಕಕರಿಗೆ ಸಂಬಳ ನೀಡುವುದು ಕಷ್ಟಕರವಾಗಿದೆ.

Comments are closed.